<font face="mangal" size="3">ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ - ಆರ್ಬಿಐ - Reserve Bank of India
ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ) – ಇದಕ್ಕೆ ದಂಡನೆ
ಅಕ್ಟೋಬರ್ 20, 2016 ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ) – ಇದಕ್ಕೆ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (c) ಜೊತೆ ಪ್ರಕರಣ 46 (4) (i ) ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ನಿಬಂಧನೆಯ ಪ್ರಕರಣ 6 ರ ಉಲ್ಲಂಘನೆ ಮಾಡಿದಕ್ಕೆ ಕ್ರೆಡಿಟ್ ಅಗ್ರಿಕೊಲ್ ಕಾರ್ಪೊರೇಟ್ ಅಂಡ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಇಂಡಿಯ)ಗೆ ಭಾರತೀಯ ರಿಸರ್ವ್ ಬ್ಯಾಂಕ್ ರೂ 10 ಲಕ್ಷಗಳ ದಂಡವನ್ನು ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ.. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/979 |