<font face="mangal" size="3">ನ್ಯಾಷನಲ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್, ಪ್ರತņ - ಆರ್ಬಿಐ - Reserve Bank of India
ನ್ಯಾಷನಲ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್, ಪ್ರತಾಪ್ ಘರ್, ಉತ್ತರ ಪ್ರದೇಶ್ - ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ
ಜುಲೈ 5, 2018 ನ್ಯಾಷನಲ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್, ಪ್ರತಾಪ್ ಘರ್, ಉತ್ತರ ಪ್ರದೇಶ್ - ಈ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ (ಸಹಕಾರ ಸಂಘಗಳಿಗೆ ಅನ್ವಯಿಸುವಂತೆ) ರ ಪ್ರಕರಣ 46 (4) ರ ಜೊತೆ ಓಡಿಕೊಂಡ ಪ್ರಕರಣ 47 A(1) (c) ರ ಉಪಬಂಧಗಳ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ನ್ಯಾಷನಲ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್, ಪ್ರತಾಪ್ ಘರ್,ಉತ್ತರ ಪ್ರದೇಶ್-ಈ ಬ್ಯಾಂಕಿಗೆ, ಸಾಲ ಮಿತಿ ಬಗ್ಗೆ ಭಾ.ರಿ.ಬ್ಯಾಂಕಿನ ಸೂಚನೆಗಳು/ಮಾರ್ಗದರ್ಶನಗಳು ಶಾಸನಬದ್ಧ/ಇತರೇ ನಿರ್ಬಂಧನೆಗಳು, KYC ಷರತ್ತುಗಳು ಮತ್ತು ಸಿ ಐ ಸಿ ಸದಸಸ್ಯತ್ವ (ಸಾಲ ಮಾಹಿತಿ ಕಂಪನಿಗಳು) ಪಡೆದುಕೊಳ್ಳುವುದರ ಬಗ್ಗೆ ಉಲ್ಲಂಘನೆಗಳಿಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ರೂ.5 ಲಕ್ಷ (ಐದು ಲಕ್ಷ ರೂಗಳು) ರೂಗಳ ದಂಡ ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ‘ಕಾರಣ ಕೇಳಿ’ ಸೂಚನೆಯನ್ನು ಈ ಬ್ಯಾಂಕಿಗೆ ನೀಡಿದ್ದು, ಬ್ಯಾಂಕು ಇದಕ್ಕೆ ಲಿಖಿತ ಉತ್ತರ್ವನ್ನು ನೀಡಿದೆ. ಈ ಪ್ರಕರಣ ಅಂಶಗಳನ್ನು ಪರಿಶೀಲಿಸಿ, ಉಲ್ಲಂಘನೆಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ಭಾರತೀಯ ರಿಸರ್ವ್ ಬ್ಯಾಂಕ್ ದಂಡವನ್ನು ವಿಧಿಸಿದೆ. ಆಶೀಶ್ ದರ್ಯಾನಿ ಪತ್ರಿಕಾ ಪ್ರಕಟಣೆ: 2018-2019/44 |