<font face="mangal" size="3">ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿ  - ಆರ್ಬಿಐ - Reserve Bank of India
ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ
ಅಕ್ಟೋಬರ್ 28, 2016 ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಇದಕ್ಕೆ ಆರ್ ಬಿ ಐ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ( ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (b) ಜೊತೆ ಪ್ರಕರಣ 46 (4)ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬ್ಯಾಂಕಿನ ನಿರ್ದೇಶಕರು ಮತ್ತು ಅವರ ಸಂಬಂಧಿಗಳಿಗೆ ನೀಡಬಹುದಾದ ಸಾಲಗಳ ಕುರಿತು ಇರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಉಲ್ಲಂಘನೆ ಕಾರಣಗಳಿಗಾಗಿ, ದೇವಿ ಗಾಯತ್ರಿ ಕೋ – ಒಪೆರಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ರೂ 1 ಲಕ್ಷ (ಒಂದು ಲಕ್ಷ ರೂಪಾಯಿಗಳು ಮಾತ್ರ) ವಿತ್ತ ದಂಡ ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ. ನಂತರ ಖುದ್ದಾಗಿ ಹೇಳಿಕೆ ನೀಡುವ ಅವಕಾಶವನ್ನು ನೀಡಿದೆ. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1062 |