<font face="mangal" size="3">ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್ ,  - ಆರ್ಬಿಐ - Reserve Bank of India
ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್ , ತುಮಕೂರ – ಇದಕ್ಕೆ ದಂಡನೆ
ಅಕ್ಟೋಬರ್ 19, 2016 ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್ , ತುಮಕೂರ – ಇದಕ್ಕೆ ದಂಡನೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ( ಸಹಕಾರ ಸಂಘಗಳಿಗನ್ವಯಿಸುವಂತೆ)ರ ಕಲಂ 47A (1) (b) ಜೊತೆ ಪ್ರಕರಣ 46 (4)ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕಿನ ದಿನಾಂಕ ಏಪ್ರಿಲ್ 11, 2005 ರ ಸುತ್ತೋಲೆಯಲ್ಲಿರುವ ಬ್ಯಾಂಕಿನ ಹಿಂದಿನ ವರ್ಷದ ಲಾಭದ 1% ನ್ನು ಮೀರಿ ನೀಡುವ ಕೊಡುಗೆಯನ್ನು ನಿರ್ಭಂಧಿಸುವ ಸೂಚನೆಗಳ/ ಮಾರ್ಗದರ್ಶಿಗಳ ಉಲ್ಲಂಘನೆ, ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ/ಅಕ್ರಮ ಹಣ ವರ್ಗಾವಣೆ ಪ್ರತಿಬಂಧಕ –ಇದರ ಮೇಲೆ ಇರುವ ದಿನಾಂಕ ಜೂಲೈ 01, 2015 ಮಾಸ್ಟೆರ್ ಸುತ್ತೋಲೆಯ ಉಪ- ಪ್ಯಾರ (iv) (d) 3.2.2.1 (B) ಉಲ್ಲಂಘನೆ ಮತ್ತು ಕಾರಣಗಳಿಗಾಗಿ, ತುಮಕೂರ ವೀರಶೈವ ಕೋ-ಓಪೆರಟಿವ್ ಬ್ಯಾಂಕ್ ಲಿಮಿಟೆಡ್, ತುಮಕೂರ ರೂ 10 ಲಕ್ಷ (ಹತ್ತು ಲಕ್ಷ ರೂಪಾಯಿಗಳು ಮಾತ್ರ) ವಿತ್ತ ದಂಡ ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ.. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/971 |