<font face="mangal" size="3">“R” ಒಳಾಕ್ಷರವಿರುವ <span style="font-family:Arial;">₹</span> 2000 ರ ಬ್ಯಾಂಕು ನೋಟುಗಳ ನೀ - ಆರ್ಬಿಐ - Reserve Bank of India
“R” ಒಳಾಕ್ಷರವಿರುವ ₹ 2000 ರ ಬ್ಯಾಂಕು ನೋಟುಗಳ ನೀಡಿಕೆ
ನವೆಂಬರ್ 08 , 2016 “R” ಒಳಾಕ್ಷರವಿರುವ ₹ 2000 ರ ಬ್ಯಾಂಕು ನೋಟುಗಳ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ.ಉರ್ಜಿತ್ ಆರ್ ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ, ನೋಟಿನಲ್ಲಿ “R “ ಒಳಾಕ್ಷರ ಇರುವ , ಮಹಾತ್ಮಾ ಗಾಂಧಿ ಶ್ರೇಣಿ -2005 (ನೂತನ) ರ, ₹2೦00 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ![]() ![]() ಈಗ ನೀಡಲಿರುವ ನೋಟುಗಳ ವಿನ್ಯಾಸವು ಎಲ್ಲ ವಿಧದಲ್ಲೂ ಈ ಹಿಂದೆ ನೀಡಲಾದ ಮಹಾತ್ಮಾ ಗಾಂಧಿ ಶ್ರೇಣಿ (ನೂತನ) -2005 ದಿನಾಂಕ ನವೆಂಬರ್ 08, 2016 ರ ಪತ್ರಿಕಾ ಪ್ರಕಟಣೆ 1144 ಯಲ್ಲಿ ಸೂಚಿಸಿರುವ ₹ 2000 ಬ್ಯಾಂಕು ನೋಟುಗಳಂತೆಯೇ ಇರುತ್ತವೆ. ದಿನಾಂಕ ನವೆಂಬರ್ 08, 2016 ರ ಪತ್ರಿಕಾ ಪ್ರಕಟಣೆ ಸಂಖ್ಯೆ 1144 ರಲ್ಲಿ ಸೂಚಿಸಿರುವಂತೆ ಈ ಹಿಂದೆ ನೀಡಲಾಗಿರುವ ಎಲ್ಲಾ ನೋಟುಗಳು ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ. ಅಲ್ಪನ ಕಿಲಾವಾಲ ಪತ್ರಿಕಾ ಪ್ರಕಟಣೆ : 2016/2017/1145 |