RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

103376998

ವಿದೇಶಿ ವಿನಿಮಯ ವ್ಯವಹಾರಗಳನ್ನು(FOREX) ಕೈಗೊಳ್ಳಲು ಹಾಗು ವಿದೇಶಿ ವಿನಿಮಯ ವ್ಯವಹಾರಗಳನ್ನು ಕೈಗೊಳ್ಳುವ ಸಲುವಾಗಿ ವಿದ್ಯುನ್ಮಾನ ವ್ಯವಹಾರ ವೇದಿಕೆಗಳನ್ನು (ETPs) ನಿರ್ವಹಿಸಲು ಅಧಿಕೃತವಲ್ಲದ ಸಂಸ್ಥೆಗಳ ಎಚ್ಚರಿಕೆ ಪಟ್ಟಿ (Alert list) ಅನ್ನು ಆರ್‌ಬಿ‌ಐ ಬಿಡುಗಡೆ ಮಾಡಿದೆ

ಸೆಪ್ಟೆಂಬರ್ 07, 2022

ವಿದೇಶಿ ವಿನಿಮಯ ವ್ಯವಹಾರಗಳನ್ನು(FOREX) ಕೈಗೊಳ್ಳಲು ಹಾಗು ವಿದೇಶಿ ವಿನಿಮಯ ವ್ಯವಹಾರಗಳನ್ನು
ಕೈಗೊಳ್ಳುವ ಸಲುವಾಗಿ ವಿದ್ಯುನ್ಮಾನ ವ್ಯವಹಾರ ವೇದಿಕೆಗಳನ್ನು (ETPs) ನಿರ್ವಹಿಸಲು ಅಧಿಕೃತವಲ್ಲದ ಸಂಸ್ಥೆಗಳ
ಎಚ್ಚರಿಕೆ ಪಟ್ಟಿ (Alert list) ಅನ್ನು ಆರ್‌ಬಿ‌ಐ ಬಿಡುಗಡೆ ಮಾಡಿದೆ.

ಫೆಬ್ರವರಿ 03,2022 ರ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರು ಅನಧಿಕೃತ ETP ಗಳ ಮೂಲಕ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ಕೈಗೊಳ್ಳಬಾರದೆಂದು ಅಥವಾ ಅಂತಹ ಅನಧಿಕೃತ ವಿದೇಶಿ ವಿನಿಮಯ ವ್ಯವಹಾರಗಳಿಗೆ ಹಣವನ್ನು ರವಾನೆ/ಠೇವಣಿ ಮಾಡಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.

ಆದರೂ ಕೆಲವು ETP ಗಳ ಅಧಿಕೃತತೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರ್‌ಬಿ‌ಐ ಗೆ ಉಲ್ಲೇಖಗಳು ಬರುತ್ತಲೇ ಇವೆ. ಆದ್ದರಿಂದ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999 ಅಡಿಯಲ್ಲಿ ವಿದೇಶಿ ವಿನಿಮಯ ವ್ಯವಹಾರಗಳನ್ನು ನೆಡೆಸುವ ಸಲುವಾಗಲಿ ಅಥವಾ ವಿದೇಶಿ ವಿನಿಮಯ ವ್ಯವಹಾರಗಳನ್ನು ಕೈಗೊಳ್ಳಲು ETP ಗಳನ್ನು ನಿರ್ವಹಿಸುವ ಸಲುವಾಗಲಿ ಮಾನ್ಯತೆ ಪಡೆಯದ ಸಂಸ್ಥೆಗಳ “”ಎಚ್ಚರಿಕೆ ಪಟ್ಟಿ” (Alert list) ಅನ್ನು ಆರ್‌ಬಿ‌ಐ ಜಾಲತಾಣದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಈ ಎಚ್ಚರಿಕೆ ಪಟ್ಟಿಯು ಪತ್ರಿಕಾ ಪ್ರಕಟಣೆ ಸಮಯದಲ್ಲಿ ಆರ್‌ಬಿ‌ಐಗೆ ತಿಳಿದುಬಂದಿರುವ ಮಾಹಿತಿ ಆಧಾರದ ಮೇಲೆ ಪ್ರಕಟಿಸಲಾಗಿದೆ ಆದುದರಿಂದ ಈ ಪಟ್ಟಿಯು ಸಮಗ್ರವಾದುದಲ್ಲ. ಈ ಪಟ್ಟಿಯಲ್ಲಿ ಇಲ್ಲದ ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಧಿಕೃತಗೊಂಡಿದೆ ಎಂದು ಊಹಿಸಬಾರದು. ಯಾವುದೇ ವ್ಯಕ್ತಿಯ/ಸಂಸ್ಥೆಯ ಅಧಿಕೃತತೆಯ ಸ್ಥಿತಿಗತಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿರುವ ಅಧಿಕೃತ ವ್ಯಕ್ತಿ ಮತ್ತು ಅಧಿಕೃತ ETP ಗಳ ಪಟ್ಟಿಯ ಮೂಲಕ ತಿಳಿಯಬಹುದಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಅನುಮತಿ ನೀಡಲಾದ ಉದ್ದೇಶಗಳಿಗಾಗಿ ಮಾತ್ರ ಅಧಿಕೃತ ವ್ಯಕ್ತಿಗಳ ಮೂಲಕ ಭಾರತೀಯ ನಿವಾಸಿಗಳು ವಿದೇಶಿ ವಿನಿಮಯ ವ್ಯವಹಾರಗಳನ್ನು ಕೈಗೊಳ್ಳಬಹುದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಪುನರುಚ್ಚರಿಸುತ್ತದೆ. ಅನುಮತಿ ನೀಡಲಾದ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ವಿದ್ಯುನ್ಮಾನದ ಮೂಲಕ ನಡೆಸಬಹುದಾದರೂ, ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಧಿಕೃತಗೊಳಿಸಲ್ಪಟ್ಟ ETP ಗಳು ಅಥವಾ ಅಧಿಕೃತ ಷೇರು ವಿನಿಮಯ ಕೇಂದ್ರಗಳ ( ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ನಿಯಮಿತ, ಮುಂಬೈ ಷೇರು ವಿನಿಮಯ ಕೇಂದ್ರ ಮತ್ತು ಭಾರತೀಯ ಮಹಾನಗರ ಷೇರು ವಿನಿಮಯ ಕೇಂದ್ರ) ಮೂಲಕವೇ, ಭಾರತೀಯ ರಿಸರ್ವ್ ಬ್ಯಾಂಕ್ ಕಾಲ ಕಾಲಕ್ಕೆ ನಿರ್ಧಿಷ್ಟ ಪಡಿಸುವ ನಿಬಂಧನೆ ಮತ್ತು ಷರತ್ತುಗಳಿಗೆ ಅನುಗುಣವಾಗಿಯೇ ನಡೆಸಬೇಕು.

ಅನಧಿಕೃತ ETP ಗಳ ಮೂಲಕ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ವ್ಯವಹಾರಗಳನ್ನು ಕೈಗೊಳ್ಳಬಾರದೆಂದು ಅಥವಾ ಅಂತಹ ಅನಧಿಕೃತ ವ್ಯವಹಾರಗಳಿಗೆ ಹಣವನ್ನು ರವಾನೆ/ಠೇವಣಿ ಮಾಡಬಾರದೆಂದು ಭಾರತೀಯ ರಿಸೆರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಅನುಮತಿ ನೀಡಲಾದ ವ್ಯವಹಾರಗಳನ್ನು ಹೊರತುಪಡಿಸಿ ಇತರೆ ಉದ್ದೇಶಗಳಿಗಾಗಿ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ಭಾರತೀಯ ನಿವಾಸಿಗಳು ಕೈಗೊಂಡಲ್ಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಧಿಕೃತಗೊಳ್ಳದ ETP ಗಳ ಮೂಲಕ ವ್ಯವಹಾರಗಳನ್ನು ಕೈಗೊಂಡರೆ, ಅಂತಹ ವ್ಯಕ್ತಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಕಾನೂನು ಕ್ರಮಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ.

(ಯೋಗೇಶ್ ದಯಾಳ್) 
ಮುಖ್ಯ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2022-2023/835

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?