RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78508163

ವಸಂತ್ ದಾದಾ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಒಸ್ಮಾನಾಬಾದ್ , ಮಹಾರಾಷ್ಟ್ರ – ಇದಕ್ಕೆ ನಿರ್ದೇಶನ

15 ನವೆಂಬರ್, 2017

ವಸಂತ್ ದಾದಾ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಒಸ್ಮಾನಾಬಾದ್ , ಮಹಾರಾಷ್ಟ್ರ – ಇದಕ್ಕೆ ನಿರ್ದೇಶನ

ಭಾರತೀಯ ರಿಜರ್ವ್ ಬ್ಯಾಂಕ್ ,ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವಸಂತ್ ದಾದಾ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಒಸ್ಮಾನಾಬಾದ್ , ಮಹಾರಾಷ್ಟ್ರ – ಇದಕ್ಕೆ 13 ನವೆಂಬರ್ 2017 ರ ವ್ಯವಹಾರ ಸಮಯ ಮುಕ್ತಾಯದ ನಂತರ ಜಾರಿಗೆ ಬರುವಂತೆ, ಠೇವಣಿ ತೆಗೆದುಕೊಳ್ಳುವ/ ಖಾತೆದಾರರು ಹಣ ಹಿಂಪಡೆಯುವ ಗರಿಷ್ಠ ಮೊತ್ತದ ಕುರಿತು ಕೆಲವು ನಿರ್ದೇಶನಗಳನ್ನು ನೀಡಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಮೇಲೆ ಸೂಚಿಸಿದ ಬ್ಯಾಂಕು ಇನ್ನು ಮುಂದೆ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳಲಿದೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು . ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/1347

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?