<font face="mangal" size="3">ಶ್ರೀ ಗೋವರ್ದನ್ ಸಿಂಘ್ ಜಿ ರಘುವಂಶಿ ಸಹಕಾರಿ ಬ್ಯಾಂ  - ಆರ್ಬಿಐ - Reserve Bank of India
ಶ್ರೀ ಗೋವರ್ದನ್ ಸಿಂಘ್ ಜಿ ರಘುವಂಶಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಂದುರ್ಬಾರ್, ಮಹಾರಾಷ್ಟ್ರ-ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ನೀಡಿದೆ
ಸೆಪ್ಟಂಬರ್ 9, 2015 ಶ್ರೀ ಗೋವರ್ದನ್ ಸಿಂಘ್ ಜಿ ರಘುವಂಶಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಂದುರ್ಬಾರ್, ಮಹಾರಾಷ್ಟ್ರ-ಇದಕ್ಕೆ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕರಣ 56 ರ ಜೊತೆಯಲ್ಲಿ ಓದಿಕೊಂಡಂತೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕರಣ 35 A ನ ಉಪ ಪ್ರಕರಣ 1 ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕು, ಶ್ರೀ ಗೋವರ್ಧನ್ ಸಿಂಘ್ ಜಿ ರಘುವಂಶಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಂದುರ್ಬಾರ್, ಮಹಾರಾಷ್ಟ್ರ- ಇದಕ್ಕೆ ಈ ಮೂಲಕ ನಿರ್ದೇಶಿಸುವುದೇನೆಂದರೆ, 2015 ರ ಸೆಪ್ಟಂಬರ್9 ರ ಬ್ಯಾಂಕಿಂಗ್ ವ್ಯವಹಾರ ಸಮಯ ಮುಕ್ತಾಯದ ತರುವಾಯ ಮೇಲೆ ತಿಳಿಸಿರುವ ಬ್ಯಾಂಕು, ಭಾರತೀಯ ರಿಸರ್ವ್ ಬ್ಯಾಂಕಿನ ಲಿಖಿತ ಪೂರ್ವಾನುಮತಿಯಿಲ್ಲದೇ, ಸಾಲ, ಮುಂಗಡಗಳನ್ನು ನೀಡುವುದಾಗಲೀ, ಅವುಗಳನ್ನು ನವೀಕರಿಸುವುದಾಗಲೀ, ಯಾವುದೇ ಹೂಡಿಕೆಗಳನ್ನು ಮಾಡುವುದಾಗಲೀ, ಸಾಲ ಪಡೆಯುವಿಕೆ ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸುವ ಮುಖಾಂತರ ಹೊಣೆ ವಹಿಸಿಕೊಳ್ಳುವುದಾಗಲಿ, ಹೊಣೆಗಾರಿಕೆ ಮತ್ತು ಬಾಧ್ಯತೆಗಳ ನಿವಾರಣೆಯ ಸಲುವಾಗಿ ಪಾವತಿ ಮಾಡುವುದಾಗಲಿ ಅಥವಾ ಪಾವತಿಸಲು ಒಪ್ಪುವುದಾಗಲಿ ಹಾಗೂ 2015 ರ ಸೆಪ್ಟಂಬರ್, 08 ರ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿ, ಬ್ಯಾಂಕು ತನ್ನ ಯಾವುದೇ ಸ್ವತ್ತು ಅಥವಾ ಆಸ್ತಿಗಳನ್ನು ಮಾರಾಟ, ವರ್ಗಾವಣೆ ಅಥವಾ ವಿಲೇವಾರಿ ಅಥವಾ ಇದರ ಸಂಬಂಧ ರಾಜೀ ಮಾಡಿಕೊಳ್ಳುವುದಾಗಲಿ ಮಾಡುವಂತಿಲ್ಲ (ಆಸಕ್ತ ವ್ಯಕ್ತಿಗಳ ಅವಗಾಹನೆಗಾಗಿ ಇದರ ಪ್ರತಿಯನ್ನು ಬ್ಯಾಂಕಿನ ಕಟ್ಟಡದಲ್ಲಿ ಪ್ರದರ್ಶಿಸಲಾಗಿದೆ). ಮುಖ್ಯವಾಗಿ, ಮೇಲೆ ತಿಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಲ್ಲಿ ಸೂಚಿಸಿರುವ ಷರತ್ತುಗಳ ಅನ್ವಯ, ಪ್ರತಿ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ ಅಥವಾ ಠೇವಣಿ ಖಾತೆ ಅಥವಾ ಇನ್ನಾವುದೇ ಹೆಸರಿನಿಂದ ಕರೆಯಲ್ಪಡುವ ಠೇವಣಿ ಖಾತೆಯಲ್ಲಿರುವ ಒಟ್ಟು ಶಿಲ್ಕಿನಲ್ಲಿ, ರೂ 1೦೦೦/- (ಒಂದು ಸಾವಿರ ರೂಪಯಿಗಳಿಗೆ) ಮೀರದಂತೆ ಹಿಂಪಡೆಯಲು ಠೇವಣಿದಾರರಿಗೆ ಅನುಮತಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮೇಲೆ ತಿಳಿಸಿರುವ ನಿರ್ದೇಶನಗಳ ನೀಡಿಕೆ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಪರವಾನಿಗೆಯನ್ನು ರದ್ದು ಪಡಿಸಿದೆಯೆಂದು ಅರ್ಥೈಸಿಕೊಳ್ಳಬಾರದು. ಬ್ಯಾಂಕಿನ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವವರೆಗೂ, ಬ್ಯಾಂಕು ತನ್ನ ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ಬಂಧನೆಗಳಿಗೆ ಅನುಸಾರವಾಗಿ ಮುಂದುವರಿಸಬಹುದು. ಪರಿಸ್ಥಿತಿಗೆ ಅನುಗುಣವಾಗಿ, ಭಾರತೀಯ ರಿಸರ್ವ್ ಬ್ಯಾಂಕು ನಿರ್ದೇಶನಗಳಿಗೆ ಮಾರ್ಪಾಡು ಮಾಡಲು ಪರಿಗಣಿಸಬಹುದು. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2015-2016/630
|