<font face="mangal" size="3">ಕರದ್ ಜನತಾ ಸಹಕಾರಿ ಬ್ಯಾಂಕ್ ಲಿಮಿಟೆಡ್., ಕರದ್ ಜಿಲ್ - ಆರ್‌ಬಿಐ - Reserve Bank of India
ಕರದ್ ಜನತಾ ಸಹಕಾರಿ ಬ್ಯಾಂಕ್ ಲಿಮಿಟೆಡ್., ಕರದ್ ಜಿಲ್ಲೆ, ಸತ್ರಾ, ಮಹಾರಾಷ್ಟ್ರ- ಇದಕ್ಕೆ ಆರ್‌ಬಿಐ ನ ನಿರ್ದೇಶನ
09, ನವೆಂಬರ್ 2017 ಕರದ್ ಜನತಾ ಸಹಕಾರಿ ಬ್ಯಾಂಕ್ ಲಿಮಿಟೆಡ್., ಕರದ್ ಜಿಲ್ಲೆ, ಸತ್ರಾ, ಮಹಾರಾಷ್ಟ್ರ- ಇದಕ್ಕೆ ಆರ್‌ಬಿಐ ನ ನಿರ್ದೇಶನ ಭಾರತೀಯ ರಿಜರ್ವ್ ಬ್ಯಾಂಕು (ಆದೇಶ DCBS.CO.BSD-I/D-4/12.22.126/2017-18 ದಿನಾಂಕ 07, ನವೆಂಬರ್ 2017 ರ ಅನ್ವಯ) ಕರದ್ ಜನತಾ ಸಹಕಾರಿ ಬ್ಯಾಂಕ್ ಲಿಮಿಟೆಡ್., ಕರದ್ ಜಿಲ್ಲೆ, ಸತ್ರಾ, ಮಹಾರಾಷ್ಟ್ರ- ಇದನ್ನು ನಿರ್ದೇಶನಗಳಿಗೆ ಒಳಪಡಿಸಿದೆ. ಈ ನಿರ್ದೇಶನಗಳ ಅನುಸಾರ ಮೇಲೆ ತಿಳಿಸಿದ ಬ್ಯಾಂಕಿನ ಠೇವಣಿದಾರರು ತಮ್ಮ (ಉಳಿತಾಯ/ಚಾಲ್ತಿ) ಖಾತೆಯಿಂದ ರೂ. 1000 ಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ. ಕರದ್ ಜನತಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಭಾರತೀಯ ರಿಜರ್ವ್ ಬ್ಯಾಂಕಿನ ಲಿಖಿತ ಅನುಮತಿಯಿಲ್ಲದೆ ಸಾಲ ನೀಡುವ/ನವೀಕರಿಸು ವಂತಿಲ್ಲ, ಹಣ ಹೂಡಿಕೆ ಮಾಡುವಂತಿಲ್ಲ, ಯಾವುದೇ ಹೊಣೆಗಾರಿಕೆಯಲ್ಲಿ (ಸಾಲ ತೆಗುದುಕೊಳ್ಳುವುದು ಅಥವಾ ಹೊಸ ಠೇವಣಿ ತೆಗೆದುಕೊಳ್ಳುವುದು) ಭಾಗಿಯಾಗುವಂತಿಲ್ಲ, ತನ್ನ ಹೊಣೆಗಾರಿಕೆಯ ಸಲುವಾಗಿ ಯಾವುದೇ ಪಾವತಿ ಮಾಡುವ/ ಪಾವತಿ ಮಾಡಲು ಒಪ್ಪಿಕೊಳ್ಳುವ ಹಾಗಿಲ್ಲ, 07 ನವೆಂಬರ್ 2017 ರ ಆರ್‌ಬಿಐ ನ ನಿರ್ದೇಶನದಲ್ಲಿ ಸೂಚಿಸಿದ ಅಂಶಗಳನ್ನು ಹೊರೆತು ಪಡಿಸಿ ಯಾವುದೇ ಆಸ್ತಿ/ ಸೊತ್ತನ್ನು ಮಾರುವ/ ವಿಲೇವಾರಿ ಮಾಡುವ ಯಾವುದೇ ಒಪ್ಪಂದ ಕೈಗೊಳ್ಳುವ ಹಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು. ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1), ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/1292 |