RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78475929

ದಿ ವೈಶ್ ಕೋ ಆಪರೇಟೀವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್, ನವ ದೆಹಲಿ- ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ನೀಡಿದೆ

ಸೆಪ್ಟಂಬರ್ 9, 2015

ದಿ ವೈಶ್ ಕೋ ಆಪರೇಟೀವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್, ನವ ದೆಹಲಿ- ಇದಕ್ಕೆ
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ನೀಡಿದೆ

ಸಾರ್ವಜನಿಕ ಹಿತದೃಷ್ಠಿಯಿಂದ, ದಿ ವೈಶ್ ಕೋ ಆಪರೇಟೀವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್ ನವದೆಹಲಿ – ಇದಕ್ಕೆ ಕೆಲವು ನಿರ್ದೇಶನಗಳನ್ನು ನೀಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಮನಗಂಡಿದೆ. ಆದ್ದರಿಂದ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕರಣ 56 ರ ಜೊತೆಯಲ್ಲಿ ಓದಿಕೊಂಡಂತೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕರಣ 35 A ನ ಉಪ ಪ್ರಕರಣ 1 ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕು, ದಿ ವೈಶ್ ಕೋ ಆಪರೇಟೀವ್ ಕಮರ್ಷಿಯಲ್ ಬ್ಯಾಂಕ್ ಲಿಮಿಟೆಡ್ ನವದೆಹಲಿ - ಇದಕ್ಕೆ ಈ ಮೂಲಕ ನಿರ್ದೇಶಿಸುವುದೇನೆಂದರೆ, 2015 ರ ಸೆಪ್ಟಂಬರ್9 ರ ಬ್ಯಾಂಕಿಂಗ್ ವ್ಯವಹಾರ ಸಮಯ ಮುಕ್ತಾಯದ ತರುವಾಯ ಮೇಲೆ ತಿಳಿಸಿರುವ ಬ್ಯಾಂಕು, ಭಾರತೀಯ ರಿಸರ್ವ್ ಬ್ಯಾಂಕಿನ ಲಿಖಿತ ಪೂರ್ವಾನುಮತಿಯಿಲ್ಲದೇ, ಕೆಳಗೆ ತಿಳಿಸಿರುವ ಸಂಧರ್ಭಗಳನ್ನು ಹೊರತುಪಡಿಸಿ, ಸಾಲ, ಮುಂಗಡಗಳನ್ನು ನೀಡುವುದಾಗಲೀ, ಅವುಗಳನ್ನು ನವೀಕರಿಸುವುದಾಗಲೀ, ಯಾವುದೇ ಹೂಡಿಕೆಗಳನ್ನು ಮಾಡುವುದಾಗಲೀ, ಸಾಲ ಪಡೆಯುವಿಕೆ ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸುವ ಮುಖಾಂತರ ಹೊಣೆ ವಹಿಸಿಕೊಳ್ಳುವುದಾಗಲಿ, ಹೊಣೆಗಾರಿಕೆ ಮತ್ತು ಬಾಧ್ಯತೆಗಳ ನಿವಾರಣೆಯ ಸಲುವಾಗಿ ಪಾವತಿ ಮಾಡುವುದಾಗಲಿ, ಪಾವತಿಸಲು ಒಪ್ಪುವುದಾಗಲಿ ಅಥವಾ ಬ್ಯಾಂಕು ತನ್ನ ಯಾವುದೇ ಸ್ವತ್ತು ಅಥವಾ ಆಸ್ತಿಗಳನ್ನು ಮಾರಾಟ, ವರ್ಗಾವಣೆ ಅಥವಾ ವಿಲೇವಾರಿ ಅಥವಾ ಇದರ ಸಂಬಂಧ ರಾಜೀ ಮಾಡಿಕೊಳ್ಳುವುದಾಗಲಿ ಮಾಡುವಂತಿಲ್ಲ.

i, ಪ್ರತಿ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ ಅಥವಾ ಠೇವಣಿ ಖಾತೆ ಅಥವಾ ಇನ್ನಾವುದೇ ಹೆಸರಿನಿಂದ ಕರೆಯಲ್ಪಡುವ ಠೇವಣಿ ಖಾತೆಯಲ್ಲಿರುವ ಒಟ್ಟು ಶಿಲ್ಕಿನಲ್ಲಿ, ರೂ 1000/- (ಒಂದು ಸಾವಿರ ರೂಪಯಿಗಳಿಗೆ) ಮೀರದಂತೆ ಹಿಂಪಡೆಯಲು ಠೇವಣಿದಾರರಿಗೆ ಅನುಮತಿಸಬಹುದು. ಆದರೆ, ಅಂತಹ ಠೇವಣಿದಾರರು ಸಾಲ ತೆಗೆದುಕೊಳ್ಳುವ ಮೂಲಕ ಅಥವಾ ಸಾಲಕ್ಕೆ ಜಾಮೀನು ನೀಡುವ ಮೂಲಕ ಬ್ಯಾಂಕಿಗೆ ಹೊಣೆಗಾರರಾಗಿದ್ದಲ್ಲಿ, ಖಾತೆಯಲ್ಲಿರುವ ಹಣವನ್ನು ಮೊದಲಿಗೆ ಸಂಬಂಧಪಟ್ಟ ಸಾಲ ಖಾತೆಗೆ ಹೊಂದಾಣಿಕೆಮಾಡತಕ್ಕದ್ದು.

ii. ಈಗಿರುವ ಅವಧಿ ಠೇವಣಿಗಳ ವಾಯಿದೆ ಮುಗಿದಾಗ, ಅದೇ ಹೆಸರಿನಲ್ಲಿ ಮತ್ತು ಅದೇ ಸಾಮರ್ಥ್ಯದಲ್ಲಿ ನವೀಕರಿಸಬಹುದು.

iii. ಮೇಲೆ ಹೇಳಿದ ನಿರ್ದೇಶನಗಳಲ್ಲಿ ಅನುಮತಿಸಿದಂತೆ ವೆಚ್ಚ ಮಾಡಬಹುದು

ಭಾರತೀಯ ರಿಸರ್ವ್ ಬ್ಯಾಂಕಿನಿಂದ ಲಿಖಿತ ಅನುಮತಿ ಪಡೆಯದೇ ಬೇರೆ ಯಾವುದೇ ರೀತಿಯ ಹೊಣೆಗಾರಿಕೆ ವಹಿಸಿಕೊಳ್ಳುವುದಾಗಲೀ ಅಥವಾ ಹೊಣೆಗಾರಿಕೆ ತೀರಿಸುವುದಾಗಲೀ ಮಾಡುವಂತಿಲ್ಲ.

ಆಸಕ್ತ ವ್ಯಕ್ತಿಗಳ ಅವಗಾಹನೆಗಾಗಿ ಪೂರ್ಣ ನಿರ್ದೇಶನಗಳ ಪ್ರತಿಯನ್ನು ಬ್ಯಾಂಕಿನ ಕಟ್ಟಡದಲ್ಲಿ ಪ್ರದರ್ಶಿಸಲಾಗಿದೆ. ಸಂದರ್ಭಕ್ಕೆ ಅನುಗುಣವಾಗಿ, ಈ ನಿರ್ದೇಶನಗಳಿಗೆ ಮಾರ್ಪಾಡುಗಳನ್ನು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸಬಹುದು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮೇಲೆ ತಿಳಿಸಿರುವ ನಿರ್ದೇಶನಗಳ ನೀಡಿಕೆ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಪರವಾನಿಗೆಯನ್ನು ರದ್ದು ಪಡಿಸಿದೆಯೆಂದು ಅರ್ಥೈಸಿಕೊಳ್ಳಬಾರದು. ಬ್ಯಾಂಕಿನ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವವರೆಗೂ, ಬ್ಯಾಂಕು ತನ್ನ ಬ್ಯಾಂಕಿಂಗ್ ವ್ಯವಹಾರಗಳನ್ನು, ನಿರ್ಬಂಧನೆಗಳಿಗೆ ಅನುಸಾರವಾಗಿ ಮುಂದುವರಿಸಬಹುದು.

ಮುಂದಿನ ಸೂಚನೆ ನೀಡುವವರೆಗೂ, ಈ ಅದೇಶ ಚಾಲ್ತಿಯಲ್ಲಿರುತ್ತದೆ.

ಅಜಿತ್ ಪ್ರಸಾದ್
ಸಹಾಯಕ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2015-2016/626

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?