<font face="mangal" size="3px">ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ - ಆರ್ಬಿಐ - Reserve Bank of India
ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ನೀಡಿರುವ ಮಾರ್ಗದರ್ಶನಗಳನ್ನು ಆರ್ ಬಿ ಐ ಹಿಂತೆಗೆದುಕೊಂಡಿದೆ.
ಅಕ್ಟೋಬರ್ 14, 2016 ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ನೀಡಿರುವ ಮಾರ್ಗದರ್ಶನಗಳನ್ನು ಆರ್ ಬಿ ಐ ಹಿಂತೆಗೆದುಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದಿನಾಂಕ ಜುಲೈ 08, 2015 ರ ಸೂಚನೆಯ ಮೂಲಕ ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ನಗಿನ , ಬಿಜ್ನೋರ್ , ಉತ್ತರ ಪ್ರದೇಶಗೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಜೊತೆಗೆ ಕಲಂ 56 ರ ಅಡಿಯಲ್ಲಿ ಮಾರ್ಗದರ್ಶನಗಳನ್ನು ನೀಡಿತ್ತು. ಕಾಲಕಾಲಕ್ಕೆ ಈ ಮಾರ್ಗದರ್ಶನಗಳನ್ನು ವಿಸ್ತರಿಸಲಾಗಿತ್ತು ಹಾಗೂ ಕೊನೆಯ ದಿನಾಂಕ ಮಾರ್ಚ್ 30,2016 ರ ಮಾರ್ಗದರ್ಶನವು ದಿನಾಂಕ ಅಕ್ಟೋಬರ್ 14, 2016 ರ ವರೆಗೆ ಸಿಂಧುತ್ವವಾಗಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (2) ಜೊತೆಗೆ ಕಲಂ 56 ರ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಯುನೈಟೆಡ್ ಇಂಡಿಯ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ನಗಿನ , ಬಿಜ್ನೋರ್ , ಉತ್ತರ ಪ್ರದೇಶಗೆ ನೀಡಿರುವ ಮಾರ್ಗದರ್ಶನಗಳನ್ನು (ಕಾಲಕಾಲಕ್ಕೆ ಬದಲಾಯಿಸಲಾಗಿದೆ) ದಿನಾಂಕ ಅಕ್ಟೋಬರ್ 15, 2016 ರಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಈ ನಿರ್ಣಯವನ್ನು ಸಾರ್ವಜನಿಕರ ಹಿತದೃಷ್ಟಿಯ ಮೇರೆಗೆ ತೆಗೆದುಕೊಳ್ಳಲಾಗಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಬ್ಯಾಂಕ್ ತನ್ನ ದಿನನಿತ್ಯದ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರೆಸಬಹುದು. ಅನಿರುದ್ಧ ಡಿ ಜಾಧವ ಪತ್ರಿಕಾ ಪ್ರಕಟಣೆ : 2016-2017/929 |