<font face="mangal" size="3">ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇ - ಆರ್ಬಿಐ - Reserve Bank of India
ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ
ನವೆಂಬರ್ 01, 2016 ಆರ್ ಬಿ ಐ ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಛೇರಿಯನ್ನು ನವದೆಹಲಿಯಲ್ಲಿ ತೆರೆದಿದೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಜಾಲದಲ್ಲಾದ ಗಮನಾರ್ಹ ಏರಿಕೆ ಮತ್ತು ದಹಲಿಯ ಪ್ರಸ್ತುತ ಬ್ಯಾಂಕಿಂಗ್ ಲೋಕಪಾಲ್ ಕಾರ್ಯಾಲಯವು ದೊಡ್ಡ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ಬ್ಯಾಂಕಿಂಗ್ ಲೋಕಪಾಲ್ ನ ತನ್ನ ಎರಡನೆಯ ಕಾರ್ಯಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ನವದೆಹಲಿಯಲ್ಲಿ ತೆರೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್, ನವದೆಹಲಿಯಲ್ಲಿರುವ ಬ್ಯಾಂಕಿಂಗ್ ಲೋಕಪಾಲ್ ನ ಮೊದಲನೆಯ ಕಾರ್ಯಾಲಯವು ದೆಹಲಿ ಮತ್ತು ಜಮ್ಮು-ಕಾಶ್ಮೀರದ ಮೇಲೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ನವದೆಹಲಿಯಲ್ಲಿರುವ ಬ್ಯಾಂಕಿಂಗ್ ಲೋಕಪಾಲ್ ನ ಎರಡನೆಯ ಕಾರ್ಯಾಲಯವು ಹರಿಯಾಣ (ಪಂಚಕುಲ, ಯಮುನ ನಗರ್ ಮತ್ತು ಅಂಬಾಲ ಜಿಲ್ಲೆ ಹೊರತು ಪಡಿಸಿ) ಮತ್ತು ಉತ್ತರ ಪ್ರದೇಶದ ಜಿಲ್ಲೆಗಳಾದ ಗಜಿಯಾಬಾದ್ ಮತ್ತು ಗೌತಮ ಬುದ್ಧ ನಗರ ಗಳ ಮೇಲೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1079 |