<font face="mangal" size="3">ಭಾರತೀಯ ಆರ್ಥಿಕ ಸ್ಥಿತಿ 2017-18 ರ ಮೇಲೆ ಅಂಕಿ ಅಂಶಗಳ ಕಿರು &# - ಆರ್ಬಿಐ - Reserve Bank of India
ಭಾರತೀಯ ಆರ್ಥಿಕ ಸ್ಥಿತಿ 2017-18 ರ ಮೇಲೆ ಅಂಕಿ ಅಂಶಗಳ ಕಿರು ಹೊತ್ತಿಗೆ ಭಾರತೀಯ
ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ
ಸೆಪ್ಟಂಬರ್ 15, 2018 ಭಾರತೀಯ ಆರ್ಥಿಕ ಸ್ಥಿತಿ 2017-18 ರ ಮೇಲೆ ಅಂಕಿ ಅಂಶಗಳ ಕಿರು ಹೊತ್ತಿಗೆ ಭಾರತೀಯ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ಪ್ರಕಟಣೆ ಭಾರತೀಯ ಆರ್ಥಿಕ ಸ್ಥಿತಿ 2017-18 ರ ಮೇಲೆ ಅಂಕಿ ಅಂಶಗಳ (ಎಚ್ ಬಿ ಎಸ್) ಕಿರು ಹೊತ್ತಿಗೆ ಯನ್ನು ಇಂದು ಬಿಡುಗಡೆ ಮಾಡಿದೆ. ಈ ಮಾಲಿಕೆಯಲ್ಲಿ 20 ನೇ ಪ್ರಕಟಣೆಯಾದ ಇದು, ಭಾರತೀಯ ಆರ್ಥಿಕ ಸ್ಥಿತಿ ಗೆ ಸಂಬಂದಿಸಿದಂತೆ ಹಲವಾರು ಹಣಕಾಸು ಮತ್ತು ಆರ್ಥಿಕ ದಿಕ್ಸೂಚಿ ಕುರಿತು ಕಾಲ ಕಾಲದ ದತ್ತಾಂಶವನ್ನು ಪ್ರಚರಿಸುತ್ತದೆ. ಈ ಸಂಚಿಕೆಯಲ್ಲಿ, ರಾಷ್ಟ್ರೀಯ ಆದಾಯ ಸರಾಸರಿ, ಉತ್ಪಾದನೆ, ಬೆಳೆಗಳು, ಹಣ, ಬ್ಯಾಂಕಿಂಗ್, ಹಣಕಾಸು ಮಾರುಕಟ್ಟೆ, ಸಾರ್ವಜನಿಕ ಹಣಕಾಸು ಸಂಸ್ಥೆಗಳು, ವಿದೇಶಿ ವ್ಯವಹಾರ ಮತ್ತು ಪಾವತಿ ಬಾಕಿ ಮತ್ತು ಆಯ್ದ ಸಾಮಾಜಿಕ-ಆರ್ಥಿಕ ದಿಕ್ಸೂಚಿಗಳನ್ನು ತೋರುವ 242 ಅಂಕಿ ಅಂಶಗಳ ಪಟ್ಟಿಗಳನ್ನು ಅಳವಡಿಸಲಾಗಿದೆ. ಅದರಲ್ಲೂ ವಿಶೇಷವಾಗಿ, ವಾಣಿಜ್ಯ ವಲಯಕ್ಕೆ ಹರಿಯುವ ಸಂಪನ್ಮೂಲಗಳನ್ನು ಈ ಸಂಚಿಕೆಯಲ್ಲಿ ಆಳಡಿಸಲಾಗಿದೆ. ದೀರ್ಘಾವಧಿ ಮಾಲಿಕೆಗಳೂ ಸಹಾ ನಮ್ಮ ಆನ್ ಲೈನ್ ಪೋರ್ಟಲ್ “ಭಾರರತೀಯ ಆರ್ಥಿಕ ಸ್ಥಿತಿ ದತ್ತಾಂಶ (ಡಿ ಬಿ ಐ ಇ). ಇದು ಭಾರತೀಯ ರಿಸರ್ವ್ ಬ್ಯಾಂಕಿನ ದತ್ತಾಂಶ ಉಗ್ರಾಣವಾಗಿದ್ದು(storage) (https://dbie.rbi.org.in) ಬದಲಾವಣೆಗಳನ್ನು ಎಲ್ಲಾ ಮಾಲಿಕೆಗಳೂ ತಕ್ಷಣವೇ ಅಳವಡಿಸಲಾಗುತ್ತದೆ. ಎಚ್ ಬಿ ಎಸ್ ಮೇಲೆ ಮರು ಮಾಹಿತಿ/ಟೀಕೆ ಟಿಪ್ಪಣಿಗಳನ್ನು ಸ್ವ್ವಾಗತಿಸುತ್ತೇವೆ ಮತ್ತು ಇವುಗಳನ್ನು “ನಿರ್ದೇಶಕರು, ದತ್ತಾಂಶ ನಿರ್ವಹಣೆ ಮತ್ತು ಪ್ರಚಾರ ವಿಭಾಗ, ಅಂಕಿ ಅಂಶ ಮತ್ತು ಮಾಹಿತಿ ನಿರ್ವಹಣಾ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, C-9, 3ನೇ ಮಹಡಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ (ಪೂರ್ವ) ಮುಂಬೈ – 400 051 – ಈ ವಿಳಾಸಕ್ಕೆ ಇ-ಅಂಚೆ/ ಡಿ ಬಿ ಐ ಈ ತಾಣದಲ್ಲಿ ಫೀಡ್ ಬ್ಯಾಕ್ ಗುಂಡಿ ಒತ್ತುವುದರ ಮೂಲಕ ಕಳುಹಿಸಬೇಕು. ಈ ಪ್ರಕಟಣೆಯನ್ನು ಖರೀದಿಸುವುದಕ್ಕೆ ಆರ್ಡರುಗಳನ್ನು, ಮುಖ್ಯ ಮಹಾ ವ್ಯವಸ್ಥಾಪಕರು, ಮಾರಾಟ ಮತ್ತು ವಿತರಣಾ ವಿಭಾಗ, ಕಾರ್ಪೋರೇಟ್ ಸೇವೆಗಳು, ಭಾರತೀಯ ರಿಸರ್ವ್ ಬ್ಯಾಂಕ್, ಅಮರ್ ಬಿಲ್ಡಿಂಗ್, ನೆಲ ಮಹಡಿ, ಪಿ.ಎಂ ರೋಡ್, ಮುಂಬೈ-400 001 ಈ ವಿಳಾಸದಲ್ಲಿ ಸಲ್ಲಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಿನಲ್ಲಿ ಬೇಡಿಕೆ ಹುಂಡಿ(ಡಿಮಾಂಡ್ ಡ್ರಾಫ್ಟ್) ಅಥವಾ ಚೆಕ್ (ಮುಂಬೈನಲ್ಲಿ ಮಾತ್ರ ಪಾವತಿಯಾಗುವಂತೆ) ಅನ್ನು ನೀಡಬೇಕು. ಪ್ರಸ್ತುತ ಮತ್ತು ಹಿಂದಿನ ಸಂಚಿಕೆಯನ್ನು ವಿದ್ಯುನ್ಮಾನ ನಮೂನೆಯಲ್ಲಿ ವೆಚ್ಚವಿಲ್ಲದೇ ರಿಸರ್ವ್ ಬ್ಯಾಂಕಿನ್ ವೆಬ್ ತಾಣ (www.rbi.org.in) ದ ಮೂಲ್ಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಜೋಸ್ ಜೆ. ಕಟ್ಟೂರ್ ಪತ್ರಿಕಾ ಪ್ರಕಟಣೆ: 2018-2019/628 |