<font face="mangal" size="3">ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕ - ಆರ್‌ಬಿಐ - Reserve Bank of India
ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕಿ ಅಂಶಗಳು-2017 ಅನ್ನು ಆರ್ ಬಿ ಐ ಬಿಡುಗಡೆ ಮಾಡಿದೆ
ಜುಲೈ 18, 2018 ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕಿ ಅಂಶಗಳು-2017 ಅನ್ನು 2017 ರ ನಾಲಕ್ಕು ತ್ರೈಮಾಸಿಕಗಳಿಗೆ “ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕಿ ಅಂಶಗಳ (ಐ ಬಿ ಎಸ್)ನ್ನು” ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬಿಡುಗಡೆ ಮಾಡಿದೆ. (ಎ) ಸಂಲೇಖಗಳು, ಕರೆನ್ಸಿ, ನಿವಾಸಿ ದೇಶ ಮತ್ತು ಎದುರು ಪಕ್ಷಕಾರ/ವ್ಯವಹಾರ ಸಂಸ್ಥೆ ಮತ್ತು ವರದಿ ಮಾಡುವ ಬ್ಯಾಂಕುಗಳ ರಾಷ್ಟ್ರೀಯತೆ ಹಾಗೂ ಅಂತರಾಷ್ಟ್ರೀಯ ಹಕ್ಕು ಸಾಧನೆ ಮತ್ತು ಬಾಧ್ಯತೆಗಳ ಬಗ್ಗೆ ಸ್ಥಾನಿಕ ದತ್ತಾಂಶವನ್ನು ಐ ಬಿ ಎಸ್ ಹೊಂದಿರುತ್ತದೆ. (ಬಿ) ಉಳಿಕೆ ಪಕ್ವತೆ, ಸಾಲದ ವಲಯ, ಆಯಾ ದೇಶದ ಸಾಲಗಾರನ ಸಾಲ ಮಿತಿ, ಸಂಭಾವ್ಯ ನಷ್ಟ ಗರಿಷ್ಠ ಮಟ್ಟದಲ್ಲಿರುವ ದೇಶ ಸಂಬಂಧ, ಹಕ್ಕು ಸಾಧನೆಯ ಮರು ಹಂಚಿಕೆ (ಎಂದರೆ ನಷ್ಟ ವರ್ಗಾವಣೆ)ಯ ದತ್ತಾಂಶವೂ ಇದರಲ್ಲಿ ಇರುತ್ತದೆ. ದತ್ತಾಂಶವನ್ನು, ಭಾರತದ ಆರ್ಥಿಕ ಸ್ಥಿತಿ ದತ್ತಾಂಶ ಸಂಗ್ರಹಣೆ (ಡಿ ಬಿ ಐ ಇ) ಪೋರ್ಟಲ್ (ವೆಬ್ ಲಿಂಕ್ https//dbie.rbi.org.in) ಮೂಲಕ https//dbie.rbi.org.in/DBIE/dbie.rbi.?site=publications#114 ರಲ್ಲಿ ಪಡೆಯಬಹುದು. ಐ ಬಿ ಎಸ್ ವಿಧಾನ ಮತ್ತು ಪರಿಕಲ್ಪನೆಗಳ ಬಗ್ಗೆ ,ಜುಲೈ 2016 ರ ಆರ್ ಬಿ ಐ ಅಧಿಕೃತ ಲಘು ಪ್ರಕಟಣೆಯಲ್ಲಿ ಪ್ರಕಟವಾದ ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕಿ ಅಂಶಗಳು ಅನ್ನು ಪರಾಮರ್ಶಿಸಿ. ಭಾರತ ಬ್ಯಾಂಕುಗಳ ಅಂತರಾಷ್ಟ್ರೀಯ ಬ್ಯಾಂಕಿಂಗ್ ಅಂಕಿ ಅಂಶಗಳ 2017 ರ ವಿಶ್ಲೇಷಣಾ ಲೇಖನಗಳನ್ನು ಸಧ್ಯದಲ್ಲೇ ಆರ್ ಬಿ ಐ ಅಧಿಕೃತ ಲಘು ಪ್ರಕಟಣೆಯಲ್ಲಿ(ಆರ್‌ಬಿಐ ಬುಲೆಟಿನ್) ಪ್ರಕಟಿಸಲಾಗುವುದು. ಇನ್ನು ಮುಂದೆ, ಐ ಬಿ ಎಸ್ ದತ್ತಾಂಶವನ್ನು ತ್ರೈಮಾಸಿಕವಾಗಿ ಪರಿಷ್ಕರಿಸಲಾಗುವುದು. ಜೋಸ್ ಜೆ. ಕಟ್ಟೂರ್ ಪತ್ರಿಕಾ ಪ್ರಕಟಣೆ : 2018-2019/169 |