<font face="Mangal" size="3">ಕರೆನ್ಸಿ ನೋಟು ಸಂಸ್ಕರಣೆ ಮಾಡಲು ಆರ್‌ಬಿ‌ಐ ನಿಂದ ಅತ - ಆರ್ಬಿಐ - Reserve Bank of India
ಕರೆನ್ಸಿ ನೋಟು ಸಂಸ್ಕರಣೆ ಮಾಡಲು ಆರ್ಬಿಐ ನಿಂದ ಅತ್ಯಾಧುನಿಕ ಯಂತ್ರಗಳ ಬಳಕೆ
10 ಸೆಪ್ಟಂಬರ್ 2017 ಕರೆನ್ಸಿ ನೋಟು ಸಂಸ್ಕರಣೆ ಮಾಡಲು ಆರ್ಬಿಐ ನಿಂದ ಅತ್ಯಾಧುನಿಕ ಯಂತ್ರಗಳ ಬಳಕೆ ಮಾಹಿತಿ ಹಕ್ಕು ಕಾಯ್ದೆಯ ಒಂದು ಪ್ರಶ್ನೆಗೆ ನೀಡಿದ್ದ ಉತ್ತರದ ಆಧಾರದ ಮೇಲೆ, ನಿರ್ಧಿಷ್ಟಪಡಿಸಿದ ಬ್ಯಾಂಕ್ ನೋಟುಗಳ (SBN) ಎಣಿಕೆಗೆ ಯಂತ್ರಗಳ ಬಳಕೆಯನ್ನು ಆರ್ಬಿಐ ಮಾಡಲಾಗುತ್ತಿಲ್ಲವೆಂದು ಒಂದು ಪತ್ರಿಕೆಯ ವಿಭಾಗದಲ್ಲಿ ವರದಿಯಾಗಿತ್ತು. ಆದರೆ ಆರ್ಬಿಐ, ಕರೆನ್ಸಿ ನೋಟುಗಳ ಸಂಖ್ಯಾ ನಿಖರತೆ ಹಾಗೂ ಅಸಲಿಯತೆಯನ್ನು ಪರಿಶೀಲಿಸಲು ಅತ್ಯಾಧುನಿಕ ನೋಟು ಪರಿಶೀಲನೆ ಹಾಗೂ ಸಂಸ್ಕಾರಣಾ (ಕರೆನ್ಸಿ ವೆರಿಫಿಕೇಶನ್ ಅಂಡ್ ಪ್ರೊಸೆಸಿಂಗ್) ಯಂತ್ರಗಳನ್ನು ಉಪಯೋಗಿಸುತ್ತಿದೆ. ಈ ಯಂತ್ರಗಳು ನೋಟು ಎಣಿಸುವ ಯಂತ್ರಗಳಿಗಿಂತ ಉನ್ನತ ಮಟ್ಟದ್ದಾಗಿರುತ್ತವೆ. ನೋಟು ಸಂಸ್ಕಾರಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಈಗಿರುವ ಯಂತ್ರಗಳನ್ನು ಎರಡು ಪಾಳಿಗಳಲ್ಲಿ ಉಪಯೋಗಿಸಲಾಗುತ್ತಿದೆ. ಇದಲ್ಲದೆ ವಾಣಿಜ್ಯ ಬ್ಯಾಂಕುಗಳಿಂದ ಕೆಲವು ಯಂತ್ರಗಳನ್ನು ತಾತ್ಕಾಲಿಕವಾಗಿ ಪಡೆದುಕೊಂಡು ಸೂಕ್ತ ಮಾರ್ಪಾಡುಗಳೊಡನೆ ಉಪಯೋಗಿಸಲಾಗುತ್ತಿದೆ. ಆರ್ಬಿಐ ಈಗಿನ ನೋಟು ಸಂಸ್ಕಾರಣಾ ಸಾಮರ್ಥ್ಯವನ್ನು ಇನ್ನೂ ಹೆಚ್ಚು ವೃದ್ಧಿಸಲು, ಇತರೆ ಹೊಸ ವಿಧಾನಗಳ ಅನ್ವೇಷಣೆ ಮಾಡಲಾಗುತ್ತಿದೆ. ಜೋಸ್ ಜೆ ಕಟ್ಟೂರ್ ಪತ್ರಿಕಾ ಪ್ರಕಟಣೆ : 2017-2018/685 |