“ಮೇಲುಸ್ತುವಾರಿ ಸಹಕಾರ ಮತ್ತು ಮೇಲುಸ್ತುವಾರಿ ಮಾಹಿತಿಯ ವಿನಿಮಯ” ಒಪ್ಪಂದಕ್ಕೆ ಆರ್ ಬಿ ಐ ಮ್ಯಾನ್ಮಾರ್ ರಾಷ್ಟ್ರೀಯ ಬ್ಯಾಂಕಿನೊಂದಿಗೆ ತಿಳುವಳಿಕೆಯ ಸ್ಮರಣಿಕೆಗೆ ಸಹಿ ಹಾಕಿದೆ
ಅಕ್ಟೋಬರ್ 21, 2016 “ಮೇಲುಸ್ತುವಾರಿ ಸಹಕಾರ ಮತ್ತು ಮೇಲುಸ್ತುವಾರಿ ಮಾಹಿತಿಯ ವಿನಿಮಯ” ಒಪ್ಪಂದಕ್ಕೆ ಆರ್ ಬಿ ಐ ಮ್ಯಾನ್ಮಾರ್ ರಾಷ್ಟ್ರೀಯ ದಿನಾಂಕ 19, 2016 ರಂದು , ಭಾರತೀಯ ರಿಸರ್ವ ಬ್ಯಾಂಕ್ “ಮೇಲುಸ್ತುವಾರಿ ಸಹಕಾರ ಮತ್ತು ಮೇಲುಸ್ತುವಾರಿ ಮಾಹಿತಿಯ ವಿನಿಮಯ” ಒಪ್ಪಂದಕ್ಕೆ ಮ್ಯಾನ್ಮಾರ್ ರಾಷ್ಟ್ರೀಯ ಬ್ಯಾಂಕಿನೊಂದಿಗೆ ತಿಳುವಳಿಕೆಯ ಸ್ಮರಣಿಕೆಗೆ ಸಹಿ ಹಾಕಿದೆ. ಮ್ಯಾನ್ಮಾರ್ ರಾಷ್ಟ್ರೀಯ ಬ್ಯಾಂಕಿನ ಪ್ರತಿನಿಧಿಯಾಗಿ ಶ್ರೀ. ಯು. ಕ್ಯಾವ್ ಟಿನ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು, ಮ್ಯಾನ್ಮಾರ ಸರ್ಕಾರ ಸಹಿ ಹಾಕಿದರು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತಿನಿಧಿಯಾಗಿ ಶ್ರೀ. ಎಸ್ ಎಸ್ ಮುಂದ್ರ , ಉಪ ಗವರ್ನರ್ ಸಹಿ ಹಾಕಿದರು. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ, ನರೇಂದ್ರ ಮೋದಿ ಹಾಗೂ ಎಚ್. ಇ. ಆಂಗ್ ಸಾನ್ ಸುಕಿ , ಮ್ಯಾನ್ಮಾರ ಸರ್ಕಾರದ ಸಲಹೆಗಾರರು ಉಪಸ್ಥಿತರಿದ್ದರು. ಹೆಚ್ಚಿನ ಸಹಕಾರ ಮತ್ತು ಮೇಲ್ವಿಚಾರಣಾ ಮಾಹಿತಿಯನ್ನು ಹಂಚಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ದೇಶಗಳೊಂದಿಗೆ ತಿಳುವಳಿಕೆಯ ಸ್ಮರಣಿಕೆ ಹಾಗೂ ಅನೇಕ ದೇಶದ ಮೇಲ್ವಿಚಾರಕರೊಂದಿಗೆ ಸಹಕಾರ ಮೇಲುಸ್ತುವಾರಿಯ ಪತ್ರ ಮತ್ತು ಸಹಕಾರ ಹೇಳಿಕೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಲ್ಲಿಯ ತನಕ ಭಾರತೀಯ ರಿಸರ್ವ್ ಬ್ಯಾಂಕ್ 34 ದೇಶಗಳೊಂದಿಗೆ ತಿಳುವಳಿಕೆಯ ಸ್ಮರಣಿಕೆ ಹಾಗೂ ಒಂದು ಸಹಕಾರ ಮೇಲುಸ್ತುವಾರಿಯ ಪತ್ರ ಹಾಗೂ ಒಂದು ಸಹಕಾರ ಹೇಳಿಕೆಗೆ ಸಹಿ ಹಾಕಿದೆ. ಅಲ್ಪನ ಕಿಲಾವಾಲ ಪತ್ರಿಕಾ ಪ್ರಕಟಣೆ : 2016-2017/995 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: