<font face="mangal" size="3px">“L” ಒಳಾಕ್ಷರವಿರುವ <span style="font-family:Arial;">₹</span> 1000 ರ ಬ್ಯಾಂಕು ನೋಟುಗಳನ್ - ಆರ್ಬಿಐ - Reserve Bank of India
“L” ಒಳಾಕ್ಷರವಿರುವ ₹ 1000 ರ ಬ್ಯಾಂಕು ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲ ಿದೆ
ನವಂಬರ್ 16, 2015 “L” ಒಳಾಕ್ಷರವಿರುವ ₹ 1000 ರ ಬ್ಯಾಂಕು ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ರಘುರಾಮ್ ಜಿ. ರಾಜನ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2015ನ್ನು ಮುದ್ರಿಸಿರುವ, ಎರಡೂ ಸಂಖ್ಯಾಂಕಣಗಳಲ್ಲಿ “L” ಒಳಾಕ್ಷರವಿರುವ , ಮಹಾತ್ಮಾ ಗಾಂಧಿ ಶ್ರೇಣಿ -2005 ರ, ₹1000 ರ ಬ್ಯಾಂಕು ನೋಟುಗಳನ್ನು ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.ಈಗ ನೀಡಲಿರುವ ನೋಟುಗಳ ವಿನ್ಯಾಸವು ಈ ಹಿಂದೆ ನೀಡಲಾದ ಮಹಾತ್ಮಾ ಗಾಂಧಿ ಶ್ರೇಣಿ -2005 ರ ₹1000 ಬ್ಯಾಂಕು ನೋಟುಗಳಂತಯೇ ಇರುತ್ತವೆ ಹಾಗೂ ಇದರ ಜೊತೆಗೆ ಹೆಚ್ಚುವರಿ ಲಕ್ಷಣಗಳಾದ ಸಂಖ್ಯಾಂಕಣಗಳಲ್ಲಿ ಗಾತ್ರದಲ್ಲಿ ಹೆಚ್ಚಾಗುತ್ತಾ ಹೋಗುವ ಕ್ರಮ ಸಂಖ್ಯೆಗಳು, ಬಾಗಿದ ಅಂಚಿನ ಗೆರೆಗಳು ಮತ್ತು ಮುಂಭಾಗದಲ್ಲಿ ಎದ್ದು ಕಾಣುವ ಗುರುತು ಚಿನ್ಹೆಯೂ ಇರುತ್ತವೆ. ಈ ಹಿಂದೆ ನೀಡಲಾದ ₹1000 ರ ಮೌಲ್ಯವರ್ಗದ ಎಲ್ಲಾ ನೋಟುಗಳೂ ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ. ಅಲ್ಪನಾಕಿಲ್ಲಾವಾಲ ಪತ್ರಿಕಾ ಪ್ರಕಟಣೆ:2015-2016/1158 |