<font face="mangal" size="3px">“ಲಕ್ಷ್ಮಿ ವಿಷ್ಣು ಸಹಕಾರಿ ಬ್ಯಾಂಕ್ ಲಿಮಿಟೆಡ್, ಇಚ - ಆರ್ಬಿಐ - Reserve Bank of India
“ಲಕ್ಷ್ಮಿ ವಿಷ್ಣು ಸಹಕಾರಿ ಬ್ಯಾಂಕ್ ಲಿಮಿಟೆಡ್, ಇಚಲಕಾರಂಜಿ. ಕೊಲ್ಹಾಪುರ್, ಮಹಾರಾಷ್ಟ್ರ”- ಇದಕ್ಕೆ ನೀಡಿದ ನಿರ್ದೇಶನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂತೆಗುದುಕೊಂಡಿದೆ
ಅಕ್ಟೋಬರ್ 12, 2015 “ಲಕ್ಷ್ಮಿ ವಿಷ್ಣು ಸಹಕಾರಿ ಬ್ಯಾಂಕ್ ಲಿಮಿಟೆಡ್, ಇಚಲಕಾರಂಜಿ. ಕೊಲ್ಹಾಪುರ್, ಮಹಾರಾಷ್ಟ್ರ”- ಇದಕ್ಕೆ ನೀಡಿದ ನಿರ್ದೇಶನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂತೆಗುದುಕೊಂಡಿದೆ ಮಾರ್ಚ್ 28, 2006 ರಂದು “ಲಕ್ಷ್ಮಿ ವಿಷ್ಣು ಸಹಕಾರಿ ಬ್ಯಾಂಕ್ ಲಿಮಿಟೆಡ್, ಇಚಲಕಾರಂಜಿ. ಕೊಲ್ಹಾಪುರ್, ಮಹಾರಾಷ್ಟ್ರ”- ಇದಕ್ಕೆ ನೀಡಿದ ಎಲ್ಲಾ ನಿರ್ದೇಶನಗಳನ್ನೂ ಅಕ್ಟೋಬರ್ 12, 2015 ರ ವ್ಯವಹಾರದ ಮುಕ್ತಾಯ ಸಮಯದ ನಂತರ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಿಂತೆಗೆದುಕೊಂಡಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 ರ (ಸಹಕಾರಿ ಸಂಘಗಳಿಗೆ ಅನ್ವಯಿಸುವ) ಪ್ರಕರಣ 35 A ನ ಉಪ ಪ್ರಕರಣ (2) ರ ಅಡಿಯಲ್ಲಿ ತನಗೆ ದತ್ತವಾದ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ಹಿಂತೆಗುದುಕೊಂಡಿದೆ. ಆಸಕ್ತ ಸಾರ್ವಜನಿಕರ ಅವಗಾಹನೆಗಾಗಿ ಅದೇಶದ ಪ್ರತಿಯನ್ನು ಬ್ಯಾಂಕಿನ ಆವರಣದಲ್ಲಿ ಪ್ರದರ್ಶಿಸಲಾಗಿದೆ. ಇನ್ನು ಮುಂದೆ ಬ್ಯಾಂಕು ಮುಂಚಿನಂತೆ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಬಹುದು ಸಂಗೀತಾ ದಾಸ್ ಪತ್ರಿಕಾ ಪ್ರಕಟಣೆ:2015-2106/886 |