RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78489416

ಎನ್ ಸಿ ಎಫ್ ಇ ಎನ್ ಎಫ್ ಎಲ್ ಎ ಟಿ ಪರೀಕ್ಷೆಗೆ ದಾಖಲಾತಿ ಆರಂಭಗೊಂಡಿದೆ (ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆ)

ಅಕ್ಟೋಬರ್ 18, 2016

ಎನ್ ಸಿ ಎಫ್ ಇ ಎನ್ ಎಫ್ ಎಲ್ ಎ ಟಿ ಪರೀಕ್ಷೆಗೆ ದಾಖಲಾತಿ ಆರಂಭಗೊಂಡಿದೆ
(ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆ)

ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರದಿಂದ ನಡೆಸಲ್ಪಡುತ್ತಿರುವ ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆಗೆ ಅಕ್ಟೋಬರ್ 15, 2016 ರಿಂದ ದಾಖಲಾತಿ ಆರಂಭಗೊಂಡಿದೆ. ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆಯಲ್ಲಿ (ಎನ್ ಸಿ ಎಫ್ ಇ ಎನ್ ಎಫ್ ಎಲ್ ಟಿ 2016-17 ) ಭಾಗವಹಿಸುವಂತೆ ತರಗತಿ VI ರಿಂದ X ರವರೆಗಿನ ಎಲ್ಲ ವಿದ್ಯಾರ್ಥಿಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ (NISM), ನವಿ ಮುಂಬೈ ಆಹ್ವಾನಿಸುತ್ತದೆ.

ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲಾಗುವುದು (ಕಂಪ್ಯೂಟರ್ ಸೌಕರ್ಯ ಮತ್ತು ಇಂಟರ್ನೆಟ್ ಸೌಕರ್ಯ ಇರುವ ಶಾಲೆಗಳಲ್ಲಿ ಮಾತ್ರ ) ಮತ್ತು ಆಫ್ ಲೈನ್ (ಶಾಲೆಗಳಲ್ಲಿ ಪೇಪರ್ ಮತ್ತು ಪೆನ್ ಮೂಲಕ ) ಮೂಲಕ ನಡೆಸಲಾಗುವುದು. ಪರೀಕ್ಷೆಯು ಎರಡು ವಿಭಾಗಗಳಲ್ಲಿ ನಡೆಸಲಾಗುವುದು. ಎನ್ ಎಫ್ ಎಲ್ ಎ ಟಿ ಕಿರಿಯ ( ವರ್ಗ VI ರಿಂದ VII ರ ವರೆಗೆ ) ಎನ್ ಎಫ್ ಎಲ್ ಎ ಟಿ ಹಿರಿಯ (ವರ್ಗ IX ರಿಂದ X ).

ಶಾಲೆಗಳು ಒನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಶಾಲೆಯ ನೋಂದಣಿಯ ನಂತರ , ವಿದ್ಯಾರ್ಥಿಯ ನೋಂದಣಿ ಆಯಾ ಶಾಲೆಗಳಿಂದ ಮಾಡಲಾಗುತ್ತದೆ. ಆನ್ ಲೈನ್/ ಆಫ್ ಲೈನ್ ಪರೀಕ್ಷಾ ಕ್ರಮದ ಆಯ್ಕೆಯ ಸ್ವಾತಂತ್ರ್ಯ ಆಯಾ ಶಾಲೆಗಳಿಗೆ ನೀಡಲಾಗುವುದು. ಆನ್ ಲೈನ್/ ಆಫ್ ಲೈನ್ ಪರೀಕ್ಷೆ ನಡೆಯುವಾಗ ತಮ್ಮ ಶಾಲೆಯ ವಿದ್ಯಾರ್ಥಿಗಳ ಮೇಲೆ ಆಯಾ ಶಾಲೆಯವರೆ ನಿಗಾ ವಹಿಸಬೇಕು. ಆನ್ ಲೈನ್/ ಆಫ್ ಲೈನ್ ಪರೀಕ್ಷೆಗೆ ಬೇಕಾಗಿರುವ ಎಲ್ಲ ಸಹಾಯವನ್ನು ಎನ್ ಸಿ ಎಫ್ ಇ / ಎನ್ ಐ ಎಸ್ ಎಂ ನೀಡುತ್ತದೆ.

ಶಾಲೆಗಳು ಈ ವೆಬ್ ಲಿಂಕ್ ಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು : http://www.ncfeindia.org/nflat

ಮುಖ್ಯ ದಿನಾಂಕಗಳು

  ಆನ್ ಲೈನ್ ಪರಿಕ್ಷೆ ಆಫ್ ಲೈನ್ ಪರೀಕ್ಷೆ
ನೋಂದಣಿಯ ಆರಂಭ ಅಕ್ಟೋಬರ್ 15, 2016 ಅಕ್ಟೋಬರ್ 15, 2016
ನೋಂದಣಿಯ ಮುಕ್ತಾಯ ನವಂಬರ್ 22, 2016 ನವಂಬರ್ 22, 2016
ಮೊದಲ ಹಂತ – ಪರೀಕ್ಷೆಯ ದಿನಾಂಕ ನವಂಬರ್ 25 , 2016 – ಜನವರಿ 7 ,2017* ಡಿಸೆಂಬರ್ 1- ಡಿಸೆಂಬರ್ 10, 2016 **
ಎರಡನೆಯ ಹಂತ – ಪ್ರಾದೇಶಿಕ ಮತ್ತು ರಾಷ್ಟ್ರೀಯ ಸ್ಪರ್ಧೆ ಫೆಬ್ರುವರಿ 1, 2017 ರಿಂದ ಫೆಬ್ರುವರಿ 28, 2017
* ಕಂಪ್ಯೂಟರ್ ಸೌಕರ್ಯ ಮತ್ತು ಇಂಟರ್ನೆಟ್ ಸೌಕರ್ಯ ಇರುವ ಶಾಲೆಗಳಲ್ಲಿ ಮಾತ್ರ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲಾಗುವುದು
** ಆಫ್ ಲೈನ್ ಪರೀಕ್ಷೆಯನ್ನು ಆಯಾ ಶಾಲೆಗಳಲ್ಲಿ ಪೇಪರ್ ಮತ್ತು ಪೆನ್ ಮೂಲಕ ನಡೆಸಲಾಗುವುದು

ಎನ್ ಎಫ್ ಎಲ್ ಎ ಟಿ ಮತ್ತು ಎನ್ ಎಫ್ ಎಲ್ ಎ ಟಿ ಕಿರಿಯ ಪರೀಕ್ಷೇಯ ಅವಧಿಯು 60 ನಿಮಿಷಗಳಾಗಿವೆ ಹಾಗೂ ಕ್ರಮವಾಗಿ 75 ಮತ್ತು 50 ಪ್ರಶ್ನೆಗಳನ್ನು ಹೊಂದಿರುತ್ತದೆ. ಪರೀಕ್ಷೆಯು ಹಿಂದಿ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ನಡೆಸಲಾಗುವುದು. ಪಠ್ಯಕ್ರಮದ ವಿವರಗಳು ಎನ್ ಸಿ ಎಫ್ ಇ ವೆಬ್ಸೈಟ್ನಲ್ಲಿ ಲಭ್ಯವಿದೆ.

ಪ್ರಶಸ್ತಿ :

ರಾಷ್ಟ್ರಮಟ್ಟದ ವಿಜೇತುದಾರರಿಗೆ (ಮೊದಲ 3 ಶಾಲೆಗಳು) ತಲಾ . 35000/- ರೂ ನಗದು ಹಾಗೂ ಶೀಲ್ಡ್ ನೀಡಲಾಗುವುದು. ರಾಷ್ಟ್ರಮಟ್ಟದ ವಿಜೇತರಾದ ಶಾಲಾ ವಿದ್ಯಾರ್ಥಿಗಳನ್ನು (1+1 ಜೊತೆ ) ಪ್ರಮಾಣ ಪತ್ರ , ಪದಕ ಹಾಗೂ ಲ್ಯಾಪ್ ಟಾಪ್ ಗಳನ್ನು ನೀಡಿ ಸನ್ಮಾನಿಸಲಾಗುವುದು.

ಪ್ರಾದೇಶಿಕ ವಿಜೇತುದಾರರಿಗೆ (ಮೊದಲ 3 ಶಾಲೆಗಳು) ತಲಾ . 25000/- ರೂ ನಗದು ಹಾಗೂ ಶೀಲ್ಡ್ ನೀಡಲಾಗುವುದು. ಪ್ರಾದೇಶಿಕ ವಿಜೇತರಾದ ಶಾಲಾ ವಿದ್ಯಾರ್ಥಿಗಳನ್ನು (1+1 ಜೊತೆ ) ಪ್ರಮಾಣ ಪತ್ರ , ಪದಕ ಹಾಗೂ ಲ್ಯಾಪ್ ಟಾಪ್ ಗಳನ್ನು ನೀಡಿ ಸನ್ಮಾನಿಸಲಾಗುವುದು.

ಹೆಚ್ಚಿನ ಮಾಹಿತಿಯನ್ನು ಈ ಕೆಳೆಗಿನ ವಿಳಾಸದಲ್ಲಿ ಪಡೆಯಬಹುದು :

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ , ಎನ್ ಐ ಎಸ್ ಎಂ ಭವನ , ಪ್ಲಾಟ್ ನಂ 82 , ಸೆಕ್ಟರ್ 17 , ವಾಶಿ , ನವಿ ಮುಂಬೈ – 400703 , ಫೋನ್ : 022-66734600-02 , ಇ ಮೈಲ್ : nflat@nism.ac.in, ವೆಬ್ ತಾಣ : www.ncfeindia.org | www.nism.ac.in

ಹಿನ್ನೆಲೆ

ಹಣಕಾಸು ಶಿಕ್ಷಣ ರಾಷ್ಟ್ರೀಯ ಕಾರ್ಯತಂತ್ರದ ಅನುಷ್ಠಾನಗೊಳಿಸಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ ಮಧ್ಯವರ್ತಿಯಾಗಿ ಕಾರ್ಯವಹಿಸುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ , ಭಾರತೀಯ ಭದ್ರತಾ ಮತ್ತು ವಿನಿಮಯ ಬೋರ್ಡ್ ,ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ , ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತೆ ಮತ್ತು ಸೇರ್ಪಡೆ ದೃಷ್ಟಿಯಿಂದ ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಯಿತು.

ಈ ದಿಸೆಯಲ್ಲಿ ಎನ್ ಸಿ ಎಫ್ ಇ ನ ರಾಷ್ಟ್ರೀಯ ಆರ್ಥಿಕ ಸಾಕ್ಷರತೆ ಮೌಲ್ಯಮಾಪನ ಪರೀಕ್ಷೆ ಒಂದು ಪುಟ್ಟ ಹೆಜ್ಜೆಯಾಗಿದೆ. ರಾಷ್ಟ್ರ ಮಟ್ಟದ ಪರೀಕ್ಷೆಯ ಮೂಲಕ , ಎನ್ ಸಿ ಎಫ್ ಇ ಶಾಲಾ ಮಕ್ಕಳನ್ನು (ವರ್ಗ VI ರಿಂದ X ರ ವರೆಗೆ ) ಹಣಕಾಸಿನ ಸಂಗತಿಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸಲು ಯೋಜಿಸಿದೆ. ಇದರಿಂದ ಮಕ್ಕಳು ತಮ್ಮ ಜೀವನದ ನಂತರದ ದಿನಗಳಲ್ಲಿ ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿ ಆಗುತ್ತದೆ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/956

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?