<font face="mangal" size="3">ಅಲ್ವಾರ್ ಆರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಅಲ್ವಾ  - ಆರ್ಬಿಐ - Reserve Bank of India
ಅಲ್ವಾರ್ ಆರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಅಲ್ವಾರ್, ರಾಜಸ್ಥಾನ್ ಇದರ ಪರವಾನಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ
ಜುಲೈ 6, 2018 ಅಲ್ವಾರ್ ಆರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಅಲ್ವಾರ್, ರಾಜಸ್ಥಾನ್ ಇದರ ಭಾರತೀಯ ರಿಸರ್ವ್ ಬ್ಯಾಂಕ್ ದಿನಾಂಕ ಜುಲೈ 03, 2018ರ ತನ್ನ್ ಆದೇಶದ ಮೂಲಕ ಅಲ್ವಾರ್ ಆರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಅಲ್ವಾರ್, ರಾಜಸ್ಥಾನ್ ಇದು ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸದಂತೆ ಇದರ ಪರವಾನಿಗೆಯನ್ನು, ಜುಲೈ 05, 2018ರ ದಿನ ಬ್ಯಾಂಕಿಂಗ್ ವ್ಯವಾಹಾರದ ಮುಕ್ತಾಯ ಸಮಯದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಸಹಕಾರ ಸಂಘಗಳ ನಿಬಂಧಕರು, ಉತ್ತರಪ್ರದೇಶ, ಇವರೂ ಸಹಾ ಈ ಬ್ಯಾಂಕ್ ಅನ್ನು ಸಮಾಪನಗೊಳಿಸಲು ಆದೇಶ ನೀಡಲು ಮತ್ತು ಸಮಾಪನಾ ಅಧಿಕಾರಿಯನ್ನು ನೇಮಿಸಲು ಕೋರಿದ್ದಾರೆ. ಈ ಬ್ಯಾಂಕಿನ ಪರವಾನಿಗೆಯನ್ನು ಈ ಕೆಳಕಂಡ ಕಾರಣಗಳಿಗಾಗಿ ರಿಸರ್ವ್ ಬ್ಯಾಂಕ್ ರದ್ದುಪಡಿಸಿದೆ. i. ಬ್ಯಾಂಕು ಸಾಕಷ್ಟು ಬಂಡವಾಳವನ್ನು ಹೊಂದಿಲ್ಲ ಮತ್ತು ಇದಕ್ಕೆ ಗಳಿಸುವ ಸಾಮರ್ಥ್ಯವೂ ಇಲ್ಲ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ಪ್ರಕರಣ 56ರ ಜೊತೆಗೆ ಓಡಿಕೊಂಡ ಪ್ರಕರಣ 11(1) ಮತ್ತು ಪ್ರಕರಣ 22(3) (ಡಿ) ರ ಉಪ ಬಂಧಗಳನ್ನು ಈ ಬ್ಯಾಂಕ್ ಪಾಲಿಸಲು ಸಾಧ್ಯವಿಲ್ಲ. ii. ಠೇವಣಿಗಳು ಪಕ್ವತೆಗೆ ಬಂದಾಗ, ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಮತ್ತು ಮುಂಬರುವ ಠೇವಣಿದಾರರಿಗೆ ಪೂರ್ಣವಾಗಿ ಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ ಆದ್ಧರಿಂದ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಪ್ರಕರಣ 56ರ ಜೊತೆಗೆ ಓದಿಕೊಂಡ ಪ್ರಕರಣ 22 (3) (ಎ) ರ ಷರತ್ತುಗಳನ್ನುಈ ಬ್ಯಾಂಕ್ ಪಾಲಿಸಲು ಸಾಧ್ಯವಿಲ್ಲ. iii. ಈಗಿರುವ ಮತ್ತು ಮುಂಬರುವ ಠೇವಣಿದಾರರ ಹಿತಕ್ಕೆ ದಕ್ಕೆಯಾಗುವ ರೀತಿಯಲ್ಲಿ ಬ್ಯಾಂಕಿನ ವ್ಯವಹಾರಗಳು ನಡೆಯುತ್ತಿರುವುದರಿಂದ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಪ್ರಕರಣ 56ರ ಜೊತೆಗೆ ಓದಿಕೊಂಡ ಪ್ರಕರಣ 22 (3)(ಬಿ) ರ ಷರತ್ತುಗಳನ್ನುಈ ಬ್ಯಾಂಕ್ ಪಾಲಿಸಲು ಸಾಧ್ಯವಿಲ್ಲ. iv. ಸಾಕಷ್ಟು ಕಾಲಾವಕಾಶ ಮತ್ತು ಅವಕಾಶಗಳನ್ನು ನೀಡಿದ್ದರೂ ಸಹಾ ಬ್ಯಾಂಕು ತನ್ನ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ಯಾವುದೇ ಮಹತ್ತರ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿಲ್ಲವಾದ್ದರಿಂದ ಬ್ಯಾಂಕಿನ ಹಣಕಾಸು ಪರಿಸ್ಥಿತಿಯು ಹದಗೆಟ್ಟಿರುವುದಾಗಿ ಮಾರ್ಚ್ 31, 2014, ಮಾರ್ಚ್ 31, 2015 ಮತ್ತು ಮಾರ್ಚ್ 31,2016 ಕ್ಕೆ ಸಂಬಂಧಿಸಿದ ಪರಿವೀಕ್ಷಣಾ ವರದಿಗಳು ತಿಳಿಸುತ್ತವೆ. ಬ್ಯಾಂಕಿನ ಈಗಿನ ಹಣಕಾಸು ಪರಿಸ್ಥಿತಿಯು ಯಾವುದೇ ಕಾರಣಕ್ಕೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಆದ್ದರಿಂದ ಮೇಲ್ಕಂಡ ಕಾಯಿದೆಯ ಪ್ರಕರಣ 22(3) (ಇ) ಷರತ್ತುಗಳನ್ನು ಪಾಲಿಸಲು ಸಾಧ್ಯವಿಲ್ಲ. v. ಮೇಲ್ಕಂಡ ಪ್ರಕರಣ 22 (3) (ಇ) ರ ಪ್ರಕಾರ, ಈ ಬ್ಯಾಂಕಿಗೆ ಮುಂದುವರಿಯಲು ಅವಕಾಶ ನೀಡಿದರೆ ಯಾವುದೇ ಉಪಯೋಗವಿಲ್ಲ. ಬದಲಿಗೆ, ಬ್ಯಾಂಕಿಂಗ್ ವ್ಯವಹಾರ ಮತ್ತೆ ಮುಂದುವರೆಸಲು ಅನುವು ಮಾಡಿಕೊಟ್ಟರೆ ಸಾರ್ವಜನಿಕರ ಹಿತಾಸಕ್ತಿಗೆ ಮತ್ಥಷ್ಟು ಧಕ್ಕೆಯನ್ನೇ ಉಂಟುಮಾಡುತ್ತದೆ. ತನ್ನ ಪರವಾನಿಗೆಯನ್ನು ರದ್ದು ಪಡಿಸಿರುವ ಕಾರಣದಿಂದ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಪ್ರಕರಣ 56ರ ಜೊತೆ ಓದಿಕೊಂಡ ಪ್ರಕರಣ 5(ಬಿ) ರಲ್ಲಿ ವಿವರಿಸಿರುವಂತೆ ಠೇವಣಿ ಸ್ವೀಕರಣೆ ಮತ್ತು ಠೇವಣಿ ಮರುಪಾವತಿಯೂ ಸೇರಿದಂತೆ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನೂ ನಡೆಸಲು ಅಲ್ವಾರ್ ಆರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಅಲ್ವಾರ್, ರಾಜಸ್ಥಾನ್ ಇದಕ್ಕೆ ಪ್ರತಿಬಂಧಿಸಲಾಗಿದೆ. ಪರವಾನಿಗೆ ರದ್ದುಪಡಿಸುವಿಕೆ ಮತ್ತು ಸಮಾಪನಾ ಪ್ರಕ್ರಿಯೆ ಪ್ರಾರಂಭದಿಂದ, ದಿ ಐ ಸಿ ಜಿ ಸಿ ಕಾಯಿದೆ, 1961 ರ ಪ್ರಕಾರ ಇದರ ಠೇವಣಿದಾರರಿಗೆ ಮರು ಪಾವತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಎಂದಿನ ನಿಬಂಧನೆ ಮತ್ತು ಷರತ್ತುಗಳ ಅನ್ವಯ, ಸಮಾಪನಗೊಳಿಸಿದ ನಂತರ, ತಮ್ಮ ತಮ್ಮ ಠೇವಣಿ ಮೊತ್ತಕ್ಕೆ ಸಂಬಂಧಿಸಿದಂತೆ ರೂ. 1 ಲಕ್ಷದ ಮಿತಿಗೆ ಒಳಪಟ್ಟು, ದಿ ಐ ಸಿ ಜಿ ಸಿ ಯಿಂದ ರೂ. 1,00,000/- (ಒಂದು ಲಕ್ಷ ರೂ ಮಾತ್ರ) ಪಡೆಯಲು ಅರ್ಹರಾಗಿರುತ್ತಾರೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2018-2019/69 |