<font face="mangal" size="3">ಸಾವರಿನ್ ಚಿನ್ನದ ಬಾಂಡುಗಳು 2017-18, ಮಾಲಿಕೆ VIII – ನೀಡಿಕೆ ಬŇ - ಆರ್ಬಿಐ - Reserve Bank of India
ಸಾವರಿನ್ ಚಿನ್ನದ ಬಾಂಡುಗಳು 2017-18, ಮಾಲಿಕೆ VIII – ನೀಡಿಕೆ ಬೆಲೆ
17 ನವೆಂಬರ್ 2017 ಸಾವರಿನ್ ಚಿನ್ನದ ಬಾಂಡುಗಳು 2017-18, ಮಾಲಿಕೆ VIII – ನೀಡಿಕೆ ಬೆಲೆ ಭಾರತ ಸರ್ಕಾರದ ಅಧಿಸೂಚನೆ ಸಂ. F.No.4(25) – B/(W&M)/2017 ಮತ್ತು ಭಾರತೀಯ ರಿಜರ್ವ್ ಬ್ಯಾಂಕ್ ಸುತ್ತೋಲೆ IDMD.CDD.No.929/14.04.050/2017-18 ದಿನಾಂಕ 06 ಅಕ್ಟೋಬರ್ 2017 ರ ಅನ್ವಯ 09 ಅಕ್ಟೋಬರ್ 2017 ರಿಂದ 27 ಡಿಸೆಂಬರ್ ರ ವರೆಗೆ ಪ್ರತಿ ವಾರ ಸೋಮವಾರದಿಂದ ಬುಧವಾರದವರೆಗೆ ಸಾವರಿನ್ ಚಿನ್ನದ ಬಾಂಡುಗಳಿಗೆ ವಂತಿಗೆಯನ್ನು ಸ್ವೀಕರಿಸಲಾಗುತ್ತದೆ. ನಿರ್ದಿಷ್ಟ ವಾರದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನಷ್ಟೇ ಮುಂದಿನ ವಾರದ ಮೊದಲನೇ ಕೆಲಸದ ದಿನದಂದು ಇತ್ಯರ್ಥ ಮಾಡಲಾಗುವುದು . 20 ನವೆಂಬರ್ 2017 ರಿಂದ 22ನವೆಂಬರ್ 2017 ರ ಚಂದಾ ಅವಧಿಗೆ ಇತ್ಯರ್ಥ ದಿನಾಂಕ 13 ನವೆಂಬರ್ 2017 ಆಗಿದ್ದು, ಚಂದಾ ಅವಧಿಯ ಹಿಂದಿನ ವಾರದಲ್ಲಿ ಇಂಡಿಯನ್ ಬುಲ್ಲಿಯನ್ ಮತ್ತು ಜುಯಲ್ಲರ್ಸ್ ಅಸ್ಸೋಸಿಯಶನ್ ಪ್ರಕಟಿಸಿದ 999 ಪರಿಶುದ್ಧ ಚಿನ್ನದ ಬೆಳೆಯಲ್ಲಿ ಹಿಂದಿಯ ಮೂರು ದಿನಾಂತ್ಯದ ವೇಳೆಯಲ್ಲಿದ್ದ ಸರಾಸರಿ ಬೆಲೆಯ ಆಧಾರಾಧಲ್ಲಿ ಬಾಂಡ್ ಗಳ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿರ್ಧರಿಸಲಾಗುವುದು. ಎಂದರೆ ನವೆಂಬರ್ 01 ರಿಂದ 03 ರ ವರೆಗೆ ಪ್ರತಿ ಗ್ರಾಂ ಗೆ ಬೆಳೆಯು ರೂ.2934/- (ರೂಪಾಯಿ ಎರಡು ಸಾವಿರದ ಒಂಬೈನೂರ ಮೂವತ್ನಾಲ್ಕು) ಆಗುತ್ತದೆ. ಭಾರತ ಸರ್ಕಾರವು , ಭಾರತೀಯ ರಿಜರ್ವ್ ಬ್ಯಾಂಕಿನೊಡನೆ ಸಮಾಲೋಚಿಸಿ ಆನ್ ಲೈನ್ ಮೂಲಕ ಹೂಡಿಕೆ ಮಾಡಿದವರಿಗೆ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಿ ಪಾವತಿಸಿದವರಿಗೆ ಪ್ರತಿ ಗ್ರಾಂ ಗೆ ರೂ. 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. ಅಂತಹ ಹೂಡಿಕೆದಾರರಿಗೆ ಚಿನ್ನದ ಬಾಂಡುಗಳ ಬೆಳೆಯು ಪ್ರತಿ ಗ್ರಾಂ ಗೆ 2884/- (ಎರಡು ಸಾವಿರದ ಎಂಟು ನೂರ ಎಂಬತ್ನಾಲ್ಕು ) ಆಗಿರುತ್ತದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2017-2018/1379 |