RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78511562

ಸಾವರಿನ್ ಚಿನ್ನದ ಬಾಂಡುಗಳು – ಅಭೌತಿಕ ರೂಪ

08 ಆಗಸ್ಟ್ 2017

ಸಾವರಿನ್ ಚಿನ್ನದ ಬಾಂಡುಗಳು – ಅಭೌತಿಕ ರೂಪ

ಭಾರತೀಯ ರಿಜರ್ವ್ ಬ್ಯಾಂಕಿನೊಡನೆ ಸಮಾಲೋಚಿಸಿ ಕೇಂದ್ರ ಸರ್ಕಾರವು ಒಟ್ಟು ರೂ. 6030 ಕೋಟಿ ಮೌಲ್ಯದ ಚಿನ್ನದ ಬಾಂಡುಗಳನ್ನು ಇತ್ತೀಚಿನವರೆಗೂ ಬಿಡುಗಡೆ ಮಾಡಿದೆ. ಈ ಬಾಂಡುಗಳಲ್ಲಿನ ಹೂಡಿಕೆದಾರರಿಗೆ ಕಾಗದರೂಪದಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ಹಿಡುವಳಿ ಹೊಂದುವ ಆಯ್ಕೆ ನೀಡಿದೆ.

ಅಭೌತಿಕವಾಗಿ ಹೊಂದಲು ಇಚ್ಚಿಸಿರುವ ಆಯ್ಕೆಯನ್ನು ಬಹುಮಟ್ಟಿಗೆ ಯಶಸ್ವಿಯಾಗಿ ಸಂಸ್ಕರಿಸಲಾಗಿದೆ. ಆದರೆ ಕೆಲವು ದಾಖಲೆಗಳನ್ನು ಪಾನ್ ಸಂಖ್ಯೆ ಹಾಗೂ ಹೆಸರುಗಳು ಹೊಂದಾಣಿಕೆಯಾಗದಿರುವುದಕ್ಕೆ, ನಿಷ್ಕ್ರಿಯ ಅಥವಾ ಬಂದು ಮಾಡಿದ ಡಿ ಮ್ಯಾಟ್ ಖಾತೆಗಳು ಹಾಗೂ ಇತರೆ ಕಾರಣಗಳ ಸಲುವಾಗಿ ಸಂಸ್ಕರಿಸಲಾಗಿಲ್ಲ. ಅಂತಹ ಆಸಫಲ ಡಿ ಮ್ಯಾಟ್ ಖಾತೆಗಳನ್ನು ವೆಬ್ ತಾಣ : /en/web/rbi/debt-management/other-links/sovereign-gold-bonds ದಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಮೂಲವಾರು ಮಾಹಿತಿಯನ್ನು ಸ್ವೀಕೃತಿ ಕಛೇರಿಗಳು , ಹೂಡಿಕೆದಾರರ ಗುರುತು ದಾಖಲೆ ಮತ್ತು ಡಿಜಿಟಲ್ ರೂಪದಲ್ಲಿ ಬಾಂಡುಗಳು ಸಂಸ್ಕರಣೆ ಆಗದೇ ಇರುವುದಕ್ಕೆ ಕಾರಣಗಳನ್ನು ನೀಡಲಾಗಿದೆ. ಈ ದತ್ತಾಂಶವನ್ನು ಪಟ್ಟಿಯಲ್ಲಿ ತಮ್ಮ ಹೂಡಿಕೆದಾರರ ಗುರುತು ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದು. ಎಲ್ಲ ಸ್ವೀಕೃತಿ ಕಚೇರಿಗಳೂ ತಮ್ಮ ಗ್ರಾಹಕರೊಡನೆ ಸಮಾಲೋಚಿಸಿ ಸೂಕ್ತ ತಿದ್ದುಪಡಿ ಮಾಡಲು ಈ ಮಾಹಿತಿಯನ್ನು ಪಡೆಯುವುದು ಅವಶ್ಯಕ. ಈ ಸಂಬಂಧ ಭಾರತೀಯ ರಿಜರ್ವ್ ಬ್ಯಾಂಕಿನ ಎ-ಕುಬೇರ್ ಅರ್ಜಿಯಲ್ಲಿ ಅಗತ್ಯ ಮಾಡ್ಯುಲ್ ಗಳನ್ನು ಅಳವಡಿಸಿದೆ.

ಇತ್ಯರ್ಥವಾಗದೇ ಇರುವ ಸ್ಥಿತಿಯಲ್ಲಿದ್ದರೂ ಸಹ ಭಾರತೀಯ ರಿಜರ್ವ್ ಬ್ಯಾಂಕಿನ ಪುಸ್ತಕಗಳಲ್ಲಿ ಹೂಡಿಕೆಯು ನಮೂದಿಸಿದ್ದು ಅವುಗಳಿಗೆ ಸೇವೆಯನ್ನು ಸದಾ ನೀಡಲಾಗುತ್ತದೆ.

ಅನಿರುದ್ಧ ಡಿ ಜಾದವ್
ಸಹಾಯಕ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2017-2018/390

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?