RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78516066

ಸವರಿನ್ ಚಿನ್ನದ ಬಾಂಡುಗಳ ಯೋಜನೆ

06 ಅಕ್ಟೋಬರ್ 2017

ಸವರಿನ್ ಚಿನ್ನದ ಬಾಂಡುಗಳ ಯೋಜನೆ

ಭಾರತೀಯ ರಿಜರ್ವ್ ಬ್ಯಾಂಕಿನ ಜೊತೆ ಸಮಾಲೋಚಿಸಿ ಭಾರತ ಸರ್ಕಾರವು ಸಾವರಿನ್ ಚಿನ್ನದ ಬಾಂಡುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಪ್ರತಿ ವಂತಿಗೆ ಅವಧಿಯ ನಂತರ ಬರುವ ಸೋಮವಾರದಂದು ಬಾಂಡುಗಳನ್ನು ನೀಡಲಾಗುವುದು. ಬ್ಯಾಂಕುಗಳು ಎಸ್‌ಎಚ್‌ಸಿ‌ಐ‌ಎಲ್ (SHCIL), ನಿರ್ದಿಷ್ಟ ಅಂಚೆ ಕಛೇರಿಗಳು ಮತ್ತು ಅಂಗೀಕೃತ ಸ್ಟಾಕ್ ವಿನಿಮಯ ಸಂಸ್ಥೆಗಳು ಎಂದರೆ., ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗಳ ಮೂಲಕ ಬಾಂಡುಗಳನ್ನು ಮಾರಾಟ ಮಾಡಲಾಗುವುದು. ಬಾಂಡುಗಳ ವೈಶಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ.

ಕ್ರಮ ಸಂಖ್ಯೆ ವಿಷಯ ವಿವರಗಳು
1 ಉತ್ಪನ್ನದ ಹೆಸರು ಸಾವರಿನ್ ಚಿನ್ನದ ಬಾಂಡುಗಳು
2 ನೀಡುವವರು ಭಾರತ ಸರ್ಕಾರದ ಪರವಾಗಿ ರಿಜರ್ವ್ ಬ್ಯಾಂಕ್ ನೀಡುವುದು
3 ಅರ್ಹತೆ ವ್ಯಕ್ತಿಗಳೂ ಸೇರಿದಂತೆ ಭಾರತೀಯ ಅವಿಭಾಜ್ಯ ಹಿಂದೂ ಕುಟುಂಬ, ಟ್ರಸ್ಟ್ ಗಳು, ವಿಶ್ವವಿದ್ಯಾಲಯಗಳು ಮತ್ತು ಧರ್ಮಸಂಸ್ಥೆಗಳಿಗೆ ಸೀಮಿತಗೊಳಿಸಲಾಗಿದೆ.
4 ಮೌಲ್ಯ ಕನಿಷ್ಠ 1 ಗ್ರಾಂ ಹಾಗೂ ಅದರ ಗುಣಕಗಳಲ್ಲಿ ಬಾಂಡ್ ಗಳ ಮೌಲ್ಯವಿರುತ್ತದೆ
5 ಅವಧಿ ಬಾಂಡ್ ಗಳ ಅವಧಿ 8 ವರ್ಷಗಳು. ಆದರೆ ಪಾವತಿ ದಿನಾಂಕದಂದು ಜಾರಿಗೆ ಬರುವಂತೆ ಈ ಯೋಜನೆಯಿಂದ ಹೊರ ಬರುವ ಆಯ್ಕೆಯನ್ನು ಹೂಡಿಕೆದಾರರು ಮಾಡಿಕೊಳ್ಳಬಹುದು.
6 ಕನಿಷ್ಠ ಅಳತೆ ಕನಿಷ್ಠ 1 ಗ್ರಾಂ ಚಿನ್ನದ ಮೇಲೆ ಹೂಡಿಕೆ.
7 ಗರಿಷ್ಠ ಮಿತಿ ವ್ಯಕ್ತಿಗತವಾಗಿ 4 ಕಿ.ಗ್ರಾಂ ಅವಿಭಾಜ್ಯ ಕುಟುಂಬಕ್ಕೆ 20 ಕಿ.ಗ್ರಾಂ ಮತ್ತು ಟ್ರಸ್ಟ್ ಗಳು ಹಾಗೂ ಸಮಾನ ಸಂಸ್ಥೆಗಳಿಗೆ 20 ಕಿ. ಗ್ರಾಂ – ಏಕಕಾಲಕ್ಕೆ ಭಾರತ ಸರ್ಕಾರವು ಪ್ರತಿ ಆರ್ಥಿಕ ವರ್ಷಕ್ಕೆ ಸೂಚಿಸುವ ಪ್ರಕಾರ.
8 ಜಂಟಿ ಹೂಡಿಕೆ ಜಂಟಿ ಹೂಡಿಕೆ ಸಂದರ್ಭದಲ್ಲಿ ಮೊದಲನೇ ಅರ್ಜಿದಾರನಿಗೆ ಮಾತ್ರ 4 ಕಿ. ಗ್ರಾಂ ಹೂಡಿಕೆ ಮಿತಿ ಅನ್ವಯಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಣಾ ಪತ್ರ ಪಡೆದುಕೊಳ್ಳಲಾಗುವುದು. ಸೆಕೆಂಡರಿ ಮಾರುಕಟ್ಟೆಯಲ್ಲಿ ಮತ್ತು ಸರ್ಕಾರದ ಆರಂಭಿಕ ನೀಡಿಕೆಯಲ್ಲಿ ವಿವಿಧ ಮಾಲಿಕೆಗಳಲ್ಲಿ ಪಡೆದ ಬಾಂಡುಗಳೂ ಸಹ ಈ ವಾರ್ಷಿಕ ಮಿತಿಗೆ ಒಳಪಡುತ್ತವೆ.
9 ನೀಡಿಕೆ ಬೆಲೆ ಚಂದಾ ಅವಧಿಯ ಹಿಂದಿನ ವಾರದಲ್ಲಿ ಇಂಡಿಯನ್ ಬುಲ್ಲಿಯನ್ ಮತ್ತು ಜುಯಲ್ಲರ್ಸ್ ಅಸ್ಸೋಸಿಯಶನ್ ಪ್ರಕಟಿಸಿದ 999 ಪರಿಶುದ್ಧ ಚಿನ್ನದ ಬೆಳೆಯಲ್ಲಿ ಹಿಂದಿಯ ಮೂರು ದಿನಾಂತ್ಯದ ವೇಳೆಯಲ್ಲಿದ್ದ ಸರಾಸರಿ ಬೆಲೆಯ ಆಧಾರಾಧಲ್ಲಿ ಬಾಂಡ್ ಗಳ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿರ್ಧರಿಸಲಾಗುವುದು. ಆನ್ ಲೈನ್ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಚಂದಾ ಪಾವತಿಸುವವರಿಗೆ ಪ್ರತಿ ಗ್ರಾಂ ಚಿನ್ನಕ್ಕೆ ರೂ 50 ಕಡಿಮೆ ದರವಿರುತ್ತದೆ.
10 ಪಾವತಿ ಆಯ್ಕೆ ನಗದು (ಗರಿಷ್ಠ ರೂ. 20,000) ಅಥವಾ ಬೇಡಿಕೆ ಹುಂಡಿ (ಡಿಮಾಂಡ್ ಡ್ರಾಫ್ಟ್) ಅಥವಾ ಚೆಕ್ ಅಥವಾ ವಿದ್ಯುನ್ಮಾನ ಬ್ಯಾಂಕಿಂಗ್.
11 ನೀಡಿಕೆ ನಮೂನೆ GS ಆದಿನಿಯಮ 2006 ರ ಅಡಿಯಲ್ಲಿ ಸರ್ಕಾರಿ ಭದ್ರತಾ ಪತ್ರಗಳ ರೂಪದಲ್ಲಿ ಚಿನ್ನದ ಬಾಂಡ್ ಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಿಗೆಹೂಡಿಕೆ ಪ್ರಮಾಣಪತ್ರವನ್ನು ನೀಡಲಾಗುವುದು. ಡಿ-ಮ್ಯಾಟ್ ಗೆ ಪರಿವರ್ತಿಸಿಕೊಳ್ಳಲು ಬಾಂಡುಗಳು ಅರ್ಹತೆ ಹೊಂದಿರುತ್ತವೆ.
12 ವಿಮೋಚನಾ ಬೆಲೆ ಐ‌ಬಿ‌ಜೆ‌ಏ ಪ್ರಕಟಿಸಿದ ಹಿಂದಿನ ಮರುದಿನಾಂತ್ಯದ ವೇಳೆಗೆ ಇದ್ದ 999 ಶುದ್ಧ ಚಿನ್ನದ ಬೆಲೆಯ ಸರಾಸರಿ ಬೆಲೆಯ ಆಧಾರದ ಮೇಲೆ ಚಿನ್ನದ ವಿಮೋಚನಾ ಬೆಲೆಯನ್ನು ನಿರ್ಧರಿಸಲಾಗುವುದು.
13 ಮಾರಾಟ ವಿಧಾನ ಸೂಚಿತ ಬ್ಯಾಂಕುಗಳು ಎಸ್‌ಎಚ್‌ಸಿ‌ಐ‌ಎಲ್ ನಿರ್ದಿಷ್ಟ ಅಂಚೆ ಕಛೇರಿಗಳು ಮತ್ತು ಅಂಗೀಕೃತ ಸ್ಟಾಕ್ ವಿನಿಮಯ ಸಂಸ್ಥೆಗಳು ಎಂದರೆ ನ್ಯಾಷನಲ್ ಸ್ಟಾಕ್ ಎಕ್ಸ್ಛೇಂಜ್ ಅಥವಾ ಬಾಂಬೆ ಸ್ಟಾಕ್ ಎಕ್ಸ್ಛೇಂಜ್ ಗಳ ಮೂಲಕ ನೇರವಾಗಿ ಅಥವಾ ಏಜೆಂಟರ ಮೂಲಕ ಬಾಂಡ್ ಗಳನ್ನು ಮಾರಾಟ ಮಾಡಲಾಗುವುದು.
14 ಬಡ್ಡಿ ದರ ವಾರ್ಷಿಕ ನಿಶ್ಚಿತ ಶೇ. 2.50ರ ದರದಲ್ಲಿ , ಅರ್ಧವಾರ್ಷಿಕವಾಗಿ ಹೂಡಿಕೆದಾರರಿಗೆ ಪರಿಹಾರವಾಗಿ ಪಾವತಿಸಲಾಗುವುದು.
15 ಸಹಭದ್ರತೆ ಬಾಂಡುಗಳನ್ನು ಸಾಲಗಳಿಗೆ ಸಹಭದ್ರತೆಯಾಗಿ ನೀಡಬಹುದು. ಸಾಲ ಮೌಲ್ಯ ಅನುಪಾತವನ್ನು ಕಾಲಕಾಲಕ್ಕೆಭಾರತೀಯ ರಿಜರ್ವ್ ಬ್ಯಾಂಕು ನಿರ್ಧರಿಸುವ ಸಾಧಾರಣ ಚಿನ್ನ ಸಾಲಕ್ಕೆ ಸಮವಾಗಿ ನಿರ್ಧರಿಸಲಾಗುವುದು.
16 ಕೆ ವೈ ಸಿ ದಾಖಲೆ “ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ” ಮಾನದಂಡಗಳು ಭೌತಿಕವಾಗಿ ಚಿನ್ನದ ಕೊಳ್ಳುವಿಕೆ ಸಂದರ್ಭದಲ್ಲಿ ಪಡೆಯುವ ದಾಖಲೆಗಳಂತೆಯೇ ಇರುತ್ತವೆ. ಎಂದರೆ ಮತದಾರ ಗುರುತು ಚೀಟಿ , ಆಧಾರ್ ಕಾರ್ಡ್, ಪಾನ್ ಕಾರ್ಡ್/ಟಿ ಏ ಎನ್/ ಪಾಸ್ ಪೋರ್ಟ್ ಅಗತ್ಯ.
17 ತೆರಿಗೆ ಪಾವತಿ ಆದಾಯ ತೆರಿಗೆ ಅಧಿನಿಯಮ 1961(43 ಆಫ್ 1961) ಉಪಬಂಧಗಳ ಅಡಿಯಲ್ಲಿ ಚಿನ್ನದ ಬಾಂಡುಗಳಿಗೆಬರುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ವ್ಯಕ್ತಿಯು ಚಿನ್ನದ ಬಾಂಡುಗಳನ್ನು ವಿಮೋಚಿಸಿದ ಸಂದರ್ಭದಲ್ಲಿ ಬರುವ ಬಂಡವಾಳ ಲಾಭ ತೆರಿಗೆಗೆ ವಿನಾಯಿತಿ ನೀಡಲಾಗಿದೆ. ಬಾಂಡುಗಳ ವರ್ಗಾವಣೆಯಿಂದ ಯಾವುದೇ ವ್ಯಕ್ತಿಗೆ ದೀರ್ಘಕಾಲದ ಬಂಡವಾಳ ಲಾಭಕ್ಕೆ ಈ ಸೌಲಭ್ಯವನ್ನು ನೀಡಲಾಗುತ್ತದೆ.
18 ಮಾರಾಟ ಯೋಗ್ಯತೆ ಬ್ಯಾಂಕಿನಿಂದ ಬಾಂಡುಗಳ ನೀಡಿಕೆ ದಿನಾಂಕದಿಂದ 15 ದಿನಗಳ ಒಳಗೆಭಾರತೀಯ ರಿಜರ್ವ್ ಬ್ಯಾಂಕ್ ಸೂಚಿಸುವ ದಿನಾಂಕದಂದು ಸ್ಟಾಕ್ ಎಕ್ಸ್ಛೇಂಜ್ ಮೂಲಕ ಮಾರಾಟ ಮಾಡಬಹುದು.
19 ಎಸ್ ಎಲ್ ಆರ್ (ಶಾಸನಬದ್ಧ ನಗದು ಮೀಸಲು) ಅರ್ಹತೆ ಶಾಸನಬದ್ಧ ನಗದು ಮೀಸಲು ಉದ್ದೇಶದ ಬಳಕೆಗಾಗಿ ಬಾಂಡುಗಳು ಅರ್ಹತೆ ಹೊಂದಿರುತ್ತವೆ.
20 ದಲ್ಲಾಳಿ ಶುಲ್ಕ ಸ್ವೀಕೃತಿ ಕಛೇರಿಗಳಲ್ಲಿ ಸ್ವೀಕೃತವಾದ ವಂತಿಗೆಗಳ ಒಟ್ಟು ಮೊತ್ತಕ್ಕೆ ಶೇ. 1 ರ ದರದಲ್ಲಿ ಬಾಂಡುಗಳ ವಿತರಣೆಗಾಗಿ ದಲ್ಲಾಳಿ ಶುಲ್ಕವನ್ನು ಪಾವತಿಸಲಾಗುವುದು ಮತ್ತು ಸ್ವೀಕೃತಿ ಕೆಚೇರಿಗಳ ಏಜೆಂಟರುಗಳು ಅಥವಾ ಸಬ್ ಏಜೆಂಟರುಗಳಿಗೆ ತಮಗೆ ಸಂದಾಯವಾದ ದಲ್ಲಾಳಿ ಶುಲ್ಕದಲ್ಲಿ ಕನಿಷ್ಠ 50 ರಷ್ಟನ್ನು ಈ ವ್ಯವಹಾರಕ್ಕೆ ಪಾವತಿಸಬೇಕು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ: 2017-2018/957

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?