<font face="Mangal" size="3">ಯೂ ಪಿ ಸಿವಿಲ್ ಸೇಕ್ರೆಟ್ರಿಯಟ್ ಪ್ರೈಮರೀ ಕೋ-ಅಪರೇಟņ - ಆರ್ಬಿಐ - Reserve Bank of India
ಯೂ ಪಿ ಸಿವಿಲ್ ಸೇಕ್ರೆಟ್ರಿಯಟ್ ಪ್ರೈಮರೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ (ಉತ್ತರ್ ಪ್ರದೇಶ) ಇದಕ್ಕೆ ದಂಡ
12 ಸೆಪ್ಟೆಂಬರ್ 2017 ಯೂ ಪಿ ಸಿವಿಲ್ ಸೇಕ್ರೆಟ್ರಿಯಟ್ ಪ್ರೈಮರೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ (ಉತ್ತರ್ ಪ್ರದೇಶ) ಇದಕ್ಕೆ ದಂಡ ಭಾರತೀಯ ರಿಜರ್ವ್ ಬ್ಯಾಂಕು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಸಹಕಾರ ಸಂಘಗಳಿಗನ್ವಯಿಸುವಂತೆ) ರ ಕಲಂ 47A (1)(C) ಜೊತೆ ಪ್ರಕರಣ 46 (4) ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಆರ್ಬಿಐ ತನಿಖೆಯಲ್ಲಿ ಸೂಚಿಸಿದ ನ್ಯೂನತೆಗಳಿಗೆ ಅನುಸರಣೆ ಸಲ್ಲಿಕೆಯಲ್ಲಿ ಅಸಮಂಜಸವಾದ ವಿಳಂಬ ಹಾಗೂ ಕಾಯ್ದೆಯ ಕಲಂ 27 ರಲ್ಲಿ ತಿಳಿಸಿದಂತೆ ಆದಾಯದ ಮಾಹಿತಿಯನ್ನು ಪದೇ ಪದೇ ಸಲ್ಲಿಸದ ಕಾರಣ ಯೂ ಪಿ ಸಿವಿಲ್ ಸೇಕ್ರೆಟ್ರಿಯಟ್ ಪ್ರೈಮರೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ (ಉತ್ತರ್ ಪ್ರದೇಶ) ಇದಕ್ಕೆ ರೂ.5.00 ಲಕ್ಷ ದಂಡವನ್ನು ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ.. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/708 |