ಉತ್ಕರ್ಶ್ ಸ್ಮಾಲ್ ಫೈನನ್ಸ್ ಬ್ಯಾಂಕ್ ಲಿಮಿಟೆಡ್ ತನ್ನ ಕಾರ್ಯ ಆರಂಭಿಸಿದೆ
ಜನವರಿ 23, 2017 ಉತ್ಕರ್ಶ್ ಸ್ಮಾಲ್ ಫೈನನ್ಸ್ ಬ್ಯಾಂಕ್ ಲಿಮಿಟೆಡ್ ತನ್ನ ಕಾರ್ಯ ಆರಂಭಿಸಿದೆ ಉತ್ಕರ್ಶ್ ಸ್ಮಾಲ್ ಫೈನನ್ಸ್ ಬ್ಯಾಂಕ್ ಲಿಮಿಟೆಡ್ ಸಣ್ಣ ಹಣಕಾಸು ಬ್ಯಾಂಕ್ ಆಗಿ ಜನವರಿ 23, 2017 ರಿಂದ ಕಾರ್ಯ ಆರಂಭಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಮೇಲಿನ ಬ್ಯಾಂಕಿಗೆ ಸಣ್ಣ ಹಣಕಾಸು ಬ್ಯಾಂಕಿನ ವ್ಯವಹಾರ ಮಾಡಲು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ , 1949 ಕಲಂ 22 (1) ರ ಅಡಿಯಲ್ಲಿ ಪರವಾನಗಿಯನ್ನು ನೀಡಿದೆ. ಸೆಪ್ಟೆಂಬರ್ 16, 2015 ರ ಪತ್ರಿಕಾ ಪ್ರಕಟಣೆಯಲ್ಲಿ ಘೋಷಿಸಲ್ಪಟ್ಟ ಸಣ್ಣ ಹಣಕಾಸು ಬ್ಯಾಂಕ್ ಸ್ಥಾಪನೆಗೆ ತಾತ್ವಿಕ ಅನುಮೋದನೆ ನೀಡಲಾಗಿದ್ದ 10 ಸಂಸ್ಥೆಗಳಲ್ಲಿ ಉತ್ಕರ್ಶ್ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ , ವಾರಣಾಸಿ ಒಂದಾಗಿತ್ತು ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1972 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: