<font face="mangal" size="3px">ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹ - ಆರ್ಬಿಐ - Reserve Bank of India
ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆಯಲಾಗಿದೆ : ಆರ್ ಬಿ ಐ ಹೇಳಿಕೆ
ನವೆಂಬರ್ 12, 2016 ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆಯಲಾಗಿದೆ : ಆರ್ ಬಿ ಐ ಹೇಳಿಕೆ ಈ ಹಿಂದೆ ಚಾಲ್ತಿಯಲಿದ್ದ ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆದಿದ್ದರಿಂದಾಗಿ , ಈ ನೋಟುಗಳನ್ನು ಹಿಂಪಡೆಯುವ ಮತ್ತು ವಿನಿಮಯ ರೂಪದಲ್ಲಿ ಬೇರೆ ಮುಖ ಬೆಲೆಯ ಕಾನೂನು ಬದ್ಧ ನೋಟುಗಳನ್ನು ನೀಡುವ ಭಾರಿ ಹೊಣೆಗಾರಿಕೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಬಂದಿದೆ . ಈ ನಿರ್ದಿಷ್ಠ ಬ್ಯಾಂಕ್ ನೋಟುಗಳನ್ನು ಅಧಿಸೂಚನೆ ಹೊರಬಂದ ತಕ್ಷಣ ಶೀಘ್ರವಾಗಿ ಹಿಂಪಡೆಯುವ ಕೆಲಸ ಮತ್ತು ಎ ಟಿ ಎಂ ಯೆಂತ್ರಗಳು ಬೇರೆ ನೋಟುಗಳನ್ನು ನೀಡುವ ಕೆಲಸಕ್ಕೆ ಸಿದ್ಧ ಪಡಿಸುವ ಮತ್ತು ಎರಡೇ ದಿನಗಳಲ್ಲಿ ಎ ಟಿ ಎಂ ಯೆಂತ್ರಗಳನ್ನು ತುಂಬುವ ಮತ್ತು ಸಾರ್ವಜನಿಕರಿಗೆ ದೇಶದ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ವಿನಿಮಯ ಸೌಲಭ್ಯ ಕೊಡುವ ಕೆಲಸ ಒಳಗೊಂಡಿರುತ್ತದೆ . ಈ ದಿಸೆಯಲ್ಲಿ ಸಾರ್ವಜನಿಕರಿಗೆ ಆಗಬಹುದಾದ ಅನಾನುಕೂಲತೆಗಳನ್ನು ಕಡಿಮೆಗೊಳಿಸುವ ಸಲುವಾಗಿ ಬ್ಯಾಂಕು ಶಾಖೆಗಳು ಮತ್ತು ರಿಸರ್ವ್ ಬ್ಯಾಂಕಿನ ಎಲ್ಲ ಕಛೇರಿಗಳನ್ನು ಸಾಮಾನ್ಯ ವ್ಯವಹಾರದ ಸಮಯವನ್ನು ಮೀರಿ ಕೆಲಸ ಮಾಡುತ್ತಿವೆ ಮತ್ತು ಹೆಚ್ಚುವರಿ ಕೌಂಟರ್ ಗಳನ್ನು ತೆಗೆದು ಭಾರಿ ಸಂಖ್ಯೆಯಲ್ಲಿ ಬರುತ್ತಿರುವ ಸಾರ್ವಜನಿಕರ ಅಗತ್ಯಗಳನ್ನು ಪೂರೈಸುತ್ತಿವೆ . ನವಂಬರ್ 10 , 2016 ರಂದು ಸುಮಾರು 10 ಕೋಟಿ ವಿನಿಮಯ ವ್ಯವಹಾರಗಳು ನಡೆದಿರುವುದಾಗಿ ವರದಿ ಆಗಿದೆ. ಈ ಪರಿಸ್ಥಿತಿಯ ಸವಾಲುಗಳನ್ನು ನಿಭಾಯಿಸುವ ಸಲುವಾಗಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಗಳನ್ನು ಪೂರೈಸುವ ಸಲುವಾಗಿ ಎಲ್ಲ ಬ್ಯಾಂಕ್ ಶಾಖೆಗಳು ಮತ್ತು ಭಾರತೀಯ ರಿಸರ್ವ ಬ್ಯಾಂಕಿನ ಕಛೇರಿಗಳು ಶನಿವಾರ ಮತ್ತು ಭಾನುವಾರ ಕೂಡ ಕಾರ್ಯ ನಿರ್ವಹಿಸುತ್ತಿವೆ. ಕಾನೂನು ಮಾನ್ಯವಾದ ಇತರ ಮುಖ ಬೆಲೆಯ ನೋಟುಗಳ (ರೂ 2000 ವೂ ಸೇರಿದಂತೆ ) ಬೇಡಿಕೆಯನ್ನು ಪೂರೈಸುವ ಸಲುವಾಗಿ ಈ ನೋಟುಗಳ ಸಾಕಷ್ಟು ದಾಸ್ತಾನು ದೇಶಾದ್ಯಂತ ಇರುವ 4000 ಕ್ಕೂ ಹೆಚ್ಚು ಕರೆನ್ಸೀ ಚೆಸ್ಟು ಗಳಲ್ಲಿದೆ . ಬ್ಯಾಂಕು ಶಾಖೆಗಳನ್ನು ಕರೆನ್ಸೀ ಚೆಸ್ಟುಗಳೊಂದಿಗೆ ಅಗತ್ಯಗಳಿಗಾಗಿ ಲಿಂಕ್ ಮಾಡಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ನೋಟು ಮುದ್ರಣಾಲಯಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕರೆನ್ಸೀ ನೋಟುಗಳನ್ನು ಮುದ್ರಿಸುತ್ತಿವೆ. ಈ ಎಲ್ಲ ಪ್ರಯತ್ನಗಳು ನಡೆದಿರುವಂತೆಯೇ ಸಾರ್ವಜನಿಕರು ಹಣ ಪಾವತಿಯ ಬೇರೆ ವಿಧಾನಗಳಾದ ಪ್ರಿ ಪೇಡ್ ಕಾರ್ಡು / ರುಪೆ /ಕ್ರೆಡಿಟ್ /ಡೆಬಿಟ್ ಕಾರ್ಡುಗಳು , ಮೊಬೈಲ್ ಬ್ಯಾಂಕಿಂಗ್ , ಇಂಟರ್ನೆಟ್ ಬ್ಯಾಂಕಿಂಗಳಿಗೆ ಬದಲಾಯಿಸಿಕೊಳ್ಳಲು ಸೂಚಿಸಿದೆ . ಜನ ಧನ ಯೋಜನೆಯ ಅಡಿಯಲ್ಲಿ ಬ್ಯಾಂಕು ಖಾತೆಗಳನ್ನು ತೆರೆದು ಕಾರ್ಡುಗಳನ್ನು ಪಡೆದಿರುವವರು ಈ ಕಾರ್ಡುಗಳನ್ನು ಬಳಸಲು ಸೂಚಿಸಿದೆ . ಈ ರೀತಿಯ ಕಾರ್ಡು ಬಳಕೆಯಿಂದ ಕರೆನ್ಸಿ ನೋಟುಗಳ ಬೇಡಿಕೆ ತಗ್ಗುವುದರ ಜೊತೆಗೆ ಡಿಜಿಟಲ್ ಪ್ರಪಂಚದಲ್ಲಿ ಬದುಕುವ ಅನುಭವವನ್ನು ಪಡೆಯಬಹುದಾಗಿದೆ. ನಿರ್ದಿಷ್ಟ ಬ್ಯಾಂಕು ನೋಟುಗಳ ವಿನಿಮಯ ಯೋಜನೆಯು ದೇಶಾದ್ಯಂತ ಡಿಸೆಂಬರ್ 30 , 2016 ರ ವರೆಗೂ ಲಭ್ಯವಿದ್ದು , ಆನಂತರವೂ ಗೊತ್ತು ಪಡಿಸಿದ ಆರ್ ಬಿ ಐ ಕಛೇರಿಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ . ಈ ದಿಸೆಯಲ್ಲಿ ಸಾಕಷ್ಟು ಕಾಲಾವಕಾಶ ಇರುವುದರಿಂದ , ಸಾರ್ವಜನಿಕರು ಬ್ಯಾಂಕಿಂಗ್ ಶಾಖಾ ಜಾಲದ ಮೇಲೆ ಕೂಡಲೇ ಬಂದು ಅನಗತ್ಯ ಹೊರೆ ಹಾಕುವ ಅಗತ್ಯವಿಲ್ಲ. ಪಿ ಜೆ ಥಾಮಸ್ ಪತ್ರಿಕಾ ಪ್ರಕಟಣೆ : 2016-2017/1190 |