<font face="mangal" size="3">ನಿರ್ದಿಷ್ಟ ಪಡಿಸಿದ ನೋಟುಗಳ ವಿಧಿಮಾನ್ಯ ಚಲಾವಣೆಯನ - ಆರ್ಬಿಐ - Reserve Bank of India
ನಿರ್ದಿಷ್ಟ ಪಡಿಸಿದ ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂತೆಗೆದುಕೊಳ್ಳುವಿಕೆ : ಸೂಚನೆಗಳ ಕಟ್ಟು ನಿಟ್ಟಾದ ಪಾಲನೆ ಮಾಡುವಂತೆ ಸ್ವ ಸಹಾಯ ಬ್ಯಾಂಕುಗಲಿಗೆ ಆರ್ ಬಿ ಐ ನಿರ್ದೇಶನ ನೀಡಿದೆ
ನವೆಂಬರ್ 15, 2016 ನಿರ್ದಿಷ್ಟ ಪಡಿಸಿದ ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂತೆಗೆದುಕೊಳ್ಳುವಿಕೆ : ಸೂಚನೆಗಳ ಕಟ್ಟು ನಿಟ್ಟಾದ ಪಾಲನೆ ಮಾಡುವಂತೆ ಸ್ವ ಕೆಲವು ಸ್ವ ಸಹಾಯ ಬ್ಯಾಂಕುಗಳು ನಿರ್ದಿಷ್ಟ ಪಡಿಸಿದ ನೋಟುಗಳಾದ ರೂ. 500 ಹಾಗೂ ರೂ 1000 ಹಿಂಪಡೆಯುವಿಕೆಯ ಕುರಿತು ನೀಡಿರುವ ನಿರ್ದೇಶನಗಳ ಕಟ್ಟು ನಿಟ್ಟಾದ ಪಾಲನೆ ಮಾಡುತ್ತಿಲ್ಲವೆಂದು ಆರ್ ಬಿ ಐ ಗಮನಕ್ಕೆ ಬಂದಿದೆ. ಆದ್ದರಿಂದ ರಿಸರ್ವ ಬ್ಯಾಂಕ್ ಇಂದು , ನಿರ್ದಿಷ್ಟ ಪಡಿಸಿದ ನೋಟುಗಳ ವಿನಿಮಯ ಹಾಗೂ ಜಮಾ ಸಂಬಂಧಿತ ನಿರ್ದೇಶನಗಳ ಕಟ್ಟು ನಿಟ್ಟಾದ ಪಾಲನೆಯನ್ನು ಖಾತರಿ ಪಡಿಸುವಂತೆ ಸೂಚಿಸಿದೆ . ಪಟ್ಟಣ ಸಹಕಾರಿ ಬ್ಯಾಂಕುಗಳು ಅವರ ಪ್ರಾದೇಶಿಕ ಕಚೇರಿಯ ಮೂಲಕ ಹಾಗೂ ರಾಜ್ಯ ಸಹಕಾರಿ ಬ್ಯಾಂಕುಗಳು ನಬಾರ್ಡ್ ಮೂಲಕ ಮಾರ್ಗದರ್ಶನಗಳ ಪಾಲನೆಯನ್ನು ಖಾತರಿ ಪಡಿಸುವಂತೆ ಸೂಚಿಸಲಾಗಿದೆ. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1215 |