<font face="mangal" size="3px">ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹ - ಆರ್ಬಿಐ - Reserve Bank of India
ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆತ : ಆರ್ ಬಿ ಐ ಹೇಳಿಕೆ
ನವಂಬರ್ 08, 2016 ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆತ : ಆರ್ ಬಿ ಐ ಹೇಳಿಕೆ ತನ್ನ ಅಧಿಸೂಚನೆ 2652 ದಿನಾಂಕ ನವೆಂಬರ್ 08,2016 ರ ಪ್ರಕಾರ ಭಾರತೀಯ ಸರ್ಕಾರವು ನವಂಬರ್ 08 , 2016 ರ ತನಕ ಚಾಲ್ತಿಯಲಿದ್ದ ಮಹಾತ್ಮ ಗಾಂಧಿ ಶ್ರೇಣಿಯ ರೂ 500 ಮತ್ತು ರೂ 1000 ನೋಟುಗಳ ವಿಧಿಮಾನ್ಯ ಚಲಾವಣೆಯನ್ನು ಹಿಂಪಡೆದಿದೆ. ನಕಲಿ ಬ್ಯಾಂಕ್ ನೋಟುಗಳ ಪರಿಣಾಮ ತಡೆಯಲು , ನಗದು ರೂಪದಲ್ಲಿರುವ ಕಪ್ಪು ಹಣದ ಶೇಖರಣೆಯನ್ನು ರದ್ದು ಮಾಡಲು ಹಾಗೂ ಭಯೋತ್ಪಾದನೆಗೆ ಕಪ್ಪು ಹಣದ ಮೂಲಕ ಆಗುತ್ತಿರುವ ಬಂಡವಾಳವನ್ನು ತಡೆಯಲು ಇದು ಅಗತ್ಯವಾಗಿದೆ. ಈ ನೋಟುಗಳನ್ನು ಹೊಂದಿರುವ ಸಾರ್ವಜನಿಕ / ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳ ಸದಸ್ಯರು, ಸಂಘಗಳು , ಟ್ರಸ್ಟ್ ಗಳು ಇತ್ಯಾದಿ ರಿಸರ್ವ್ ಬ್ಯಾಂಕಿನ ಯಾವುದೇ ಕಛೇರಿಗಳಲ್ಲಿ ಅಥವಾ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ನವೆಂಬರ್ 10, 2016 ರಿಂದ ಬದಲಾವಣೆ ಮಾಡಿಕೊಳ್ಳಬಹುದು ಹಾಗೂ ತಮ್ಮ ಬ್ಯಾಂಕಿನ ಖಾತೆಯಲ್ಲಿ ಜಮಾ ಮಾಡಿ ಅದರ ಮೌಲ್ಯವನ್ನು ಪಡೆಯಬಹುದು. ಪ್ರತಿ ವ್ಯಕ್ತಿಯು ತನ್ನ ಹಣದ ಅಗತ್ಯಕ್ಕಾಗಿ ಬ್ಯಾಂಕ್ ಶಾಖೆಗಳಲ್ಲಿ ರೂ . 4000 ದ ತನಕ ಬದಲಾವಣೆ ಮಾಡಿಕೊಳ್ಳಬಹುದು. ಈ ಹಣದ ಬದಲಾವಣೆಯ ಸೌಲಭ್ಯವನ್ನು ಪಡೆಯಲು ಮಾನ್ಯತೆ ಹೊಂದಿರುವ ಗುರುತಿನ ಪುರಾವೆಯನ್ನು ನೀಡಬೇಕೆಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಚೆಕ್ ನೀಡುವುದರ ಮೂಲಕ , ಎನ್ ಇ ಎಫ್ ಟಿ , ಆರ್ ಟಿ ಜಿ ಎಸ್ , ಐ ಎಂ ಪಿ ಎಸ್ , ಮೊಬೈಲ್ ಬ್ಯಾಂಕಿಂಗ್ ಹಾಗೂ ಇತ್ಯಾದಿಗಳ ಮೂಲಕ ತಮ್ಮ ಖಾತೆಗೆ ಜಮಾ ಆಗಿರುವ ಹಣವನ್ನು ಯಾವುದೇ ತೊಂದರೆ ಇಲ್ಲದೆ ಬಳಸಬಹುದು. ನವಂಬರ್ 09,2016 ರಿಂದ ನವಂಬರ್ 24, 2016 ರ ತನಕ ನಗದು ಹಿಂಪಡೆಯುವಿಕೆಯನ್ನು ರೂ. 20000/- ಪ್ರತಿ ವಾರ ಮೀರದಂತೆ ಪ್ರತಿ ದಿನ ರೂ . 10000/- ಕ್ಕೆ ಸಿಮೀತಗೊಳಿಸಲಾಗಿದೆ. ಈ ಮಿತಿಯನ್ನು ಪರಿಶೀಲಿಸಲಾಗುವುದು. ನವಂಬರ್ 09, 2016 ರಂದು ಪುನರ್ಮಾಪನಗೊಳಿಸುವ ಉದ್ದೇಶದಿಂದ ಎಲ್ಲ ಎ ಟಿ ಎಂ ಹಾಗೂ ನಗದು ಯಂತ್ರಗಳ ಕಾರ್ಯ ಸ್ಥಗಿತಗೊಳಿಸಲಾಗುವುದು. ಪುನರ್ಮಾಪನದ ನಂತರ , ಈ ಎಲ್ಲ ಎ ಟಿ ಎಂ ಗಳನ್ನು ಕ್ರಿಯಾಶೀಲಗೊಳಿಸಲಾಗುವುದು ಹಾಗೂ ನವಂಬರ್ 18, 2016 ರ ತನಕ ನಗದು ಹಿಂಪಡೆಯುವಿಕೆಯನ್ನು ಪ್ರತಿ ದಿನ, ಪ್ರತಿ ಕಾರ್ಡಿಗೆ ರೂ. 2000 ಕ್ಕೆ ಸಿಮೀತಗೊಳಿಸಲಾಗಿದೆ. ಈ ಮಿತಿಯನ್ನು ನವಂಬರ್ 19,2016 ರ ನಂತರ ಪ್ರತಿ ದಿನ ಪ್ರತಿ ಕಾರ್ಡಿಗೆ ರೂ 4000ಕ್ಕೆ ಹೆಚ್ಚಿಸಬಹುದು. ಯಾವುದೇ ವ್ಯಕ್ತಿಗೆ ಈ ಮೇಲಿನ ನೋಟುಗಳ ಬದಲಾವಣೆ ಡಿಸೆಂಬರ್ 30, 2016 ರ ತನಕ ಸಾಧ್ಯವಾಗದ ಪಕ್ಷದಲ್ಲಿ ಆ ವ್ಯಕ್ತಿಯು ರಿಸರ್ವ್ ಬ್ಯಾಂಕಿನ ನಿಗದಿತ ಕಛೇರಿಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ ಇತರೆ ಸೌಲಭ್ಯಗಳ ಮುಖಾಂತರ ಹಣ ಬದಲಾವಣೆ ಮಾಡಬಹುದು. ಆರ್ ಬಿ ಐ ವೆಬ್ ತಾಣ www.rbi.org.in ಹಾಗೂ ಸರ್ಕಾರದ ವೆಬ್ ತಾಣ www.finmin.nic.in ದಲ್ಲಿ ಸಾರ್ವಜನಿಕರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1142 |