New FAQ Page 2 - ಆರ್ಬಿಐ - Reserve Bank of India
ಎಟಿಎಮ್/ವೈಟ್ ಲೇಬಲ್ ಎಟಿಎಮ್
ಉತ್ತರ. ಬ್ಯಾಂಕೇತರರು ಸ್ಥಾಪಿಸಿದ, ಒಡೆತನಹೊಂದಿದ ಹಾಗೂ ನಿರ್ವಹಿಸುವ ಎಟಿಎಮ್ಗಳನ್ನು ಡಬ್ಲ್ಯೂಎಲ್ಎಗಳು ಎಂದು ಕರೆಯಲಾಗುತ್ತದೆ. ಬ್ಯಾಂಕೇತರ ಎಟಿಎಮ್ ನಿರ್ವಾಹಕರುಗಳಿಗೆ ಪೇಮೆಂಟ್ &ಸೆಟ್ಲಮೆಂಟ್ ಸಿಸ್ಟಮ್ಸ್ ಆ್ಯಕ್ಟ್ ,2007ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ[ ಆರ್ಬಿಐ] ಅಧಿಕಾರ ನೀಡಿದೆ. ಅಧಿಕೃತ ಡಬ್ಲ್ಯೂಎಲ್ಎನಿರ್ವಾಹಕರ ಪಟ್ಟಿಯು ಆರ್ಬಿಐ ವೆಬ್ಸೈಟ್ ನಲ್ಲಿ https://www.rbi.org.in/Scripts/PublicationsView.aspx?id=12043ಲಿಂಕ್ನಲ್ಲಿ ಲಭ್ಯವಿರುತ್ತದೆ
ಉತ್ತರ. ಗ್ರಾಹಕರಿಗಾಗಿ, ಡಬ್ಲ್ಯೂಎಲ್ಎ ಬಳಸುವುದು ಡಬ್ಲ್ಯೂಎಲ್ಎಗಳಲ್ಲಿ ನಗದು ಠೇವಣಿ ಹಾಗೂ ಕೆಲವು ಮೌಲ್ಯವರ್ಧಿತ ಸೇವೆಗಳನ್ನು ಸ್ವೀಕರಿಸಲು ಅನುಮತಿಸುವುದಿಲ್ಲ ಎಂಬುದನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ [ಕಾರ್ಡ್ ನೀಡುವ ಬ್ಯಾಂಕ್ನ ಹೊರತಾದ ಬ್ಯಾಂಕ್] ನ ಎಟಿಎಮ್ ಅನ್ನು ಬಳಸುವಂತೆಯೇ ಇರುತ್ತದೆ.
ಉತ್ತರ. ವ್ಹೈಟ್ ಲೇಬಲ್ ಎಟಿಎಮ್ಗಳನ್ನು ಸ್ತಾಪಿಸಲು ಬ್ಯಾಂಕೇತರ ಘಟಕಕ್ಕೆ ಅವಕಾಶ ನೀಡುವ ನ್ಯಾಯ ಸಮ್ಮತವಾದ ಆಧಾರವೆಂದರೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ,ಹೆಚ್ಚಿದ /ವರ್ಧಿತ ಗ್ರಾಹಕ ಸೇವೆಗಾಗಿ ಎಟಿಎಮ್ನ ಭೌಗೋಲಿಕ ಹರಡುವಿಕೆಯನ್ನು ಹೆಚ್ಚಿಸುವುದಾಗಿರುತ್ತದೆ.
ಉತ್ತರ. ನಗದು ವಿತರಣೆಯ ಜೊತೆಗೆ, ಎಟಿಎಮ್ಗಳು/ಡಬ್ಲ್ಯೂಎಲ್ಎಗಳು ಗ್ರಾಹಕರಿಗೆ ಅನೇಕ ಇತರ ಸೇವೆಗಳು/ಸೌಲಭ್ಯಗಳನ್ನು ನೀಡಬಹುದು. ಈ ಕೆಲವು ಸೇವೆಗಳು ಒಳಗೊಂಡಿರುತ್ತವೆ :
- ಖಾತೆಯ ಮಾಹಿತಿ
- ನಗದು ಠೇವಣಿ [ಡಬ್ಲ್ಯೂಎಲ್ಎಗಳಲ್ಲಿ ಅನುಮತಿಸಲಾಗುವುದಿಲ್ಲ]
- ನಿಯಮಿತ ಬಿಲ್ಗಳ ಪಾವತಿ [ಡಬ್ಲ್ಯೂಎಲ್ಎಗಳಲ್ಲಿ ಅನುಮತಿಸಲಾಗುವುದಿಲ್ಲ]
- ಮೊಬೈಲ್ಗಳಿಗಾಗಿ ರೀ-ಲೋಡ್ ವ್ಹೌಚರಗಳ ಖರೀದಿ
- ಮಿನಿ/ಶಾರ್ಟ್ ಸ್ಟೇಟ್ಮೆಂಟ್ ಜನರೇಷನ್
- ಪಿನ್ ಬದಲಾವಣೆ
- ಚೆಕ್ ಬುಕ್ಗಾಗಿ ಕೋರಿಕೆ
ಉತ್ತರ. ಎಎಟಿಎಮ್ /ಎಟಿಎಮ್ ಕಮ್ ಡೆಬಿಟ್ ಕಾರ್ಡ್ಗಳು,ಕ್ರೆಡಿಟ್ ಕಾರ್ಡ್ಗಳು ಹಾಗೂ ಪ್ರಿಪೇಯ್ಡ್ ಕಾರ್ಡ್ಗಳನ್ನು , ನೀಡಿಕೆದಾರರು ಅನುಮತಿಸಿದಂತೆ ,ವಿವಿಧ ವಹಿವಾಟುಗಳಿಗಾಗಿ ಎಟಿಎಮ್ಗಳು /ಡಬ್ಲ್ಯೂಎಲ್ಎಗಳಲ್ಲಿ ಬಳಸಬಹುದು .
ಉತ್ತರ. ಹೌದು, ನವೆಂಬರ್ 01,2014ರಿಂದ ಜಾರಿಗೆ ಬಂದಂತೆ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖತೆದಾರರಿಗೆ ಎಟಿಎಮ್ಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತವಹಿವಾಟುಗಳನ್ನು ಈ ಕೆಳಗಿನಂತೆ ನೀಡಬೇಕು :
- ಯಾವುದೇ ಸ್ಥಳದಲ್ಲಿ ಬ್ಯಾಂಕಿನ ಸ್ವಂತ ಎಟಿಎಮ್ಗಳಲ್ಲಿ [ಆನ್-ಅಸ್ ವಹಿವಾಟುಗಳು] ವಹಿವಾಟುಗಳು: ಎಟಿಎಮ್ಗಳು ಸ್ಥಳವನ್ನು ಲೆಕ್ಕಿಸದೇ , ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು
- ಮೆಟ್ರೋ ಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಆರು ಮೆಟ್ರೋ ಸ್ಥಳಗಳಲ್ಲಿ ಎಟಿಎಮ್ಗಳು ಇದ್ದ ಸಂದರ್ಭದಲ್ಲಿ, ಅಂದರೆ ಮುಂಬೈ,ಹೊಸ ದೆಲ್ಲಿ,ಚೆನ್ನೈ,ಕಲ್ಕತ್ತಾ,ಬೆಂಗಳೂರು,ಹೈದರಾಬಾದ್, ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಮೂರು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
- ನಾನ್ -ಮೆಟ್ರೋಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಮೇಲಿನ ಆರು ಮೆಟ್ರೋ ಸ್ಥಳಗಳನ್ನು ಹೊರತುಪಡಿಸಿ ,ಯಾವುದೇ ಸ್ಥಳಗಳಲ್ಲಿ ,ಇತರ ಬ್ಯಾಂಕ್ ಎಟಿಎಮ್ಗಳಲ್ಲಿ ಬ್ಯಾಂಕ್ಗಳು ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
ಉತ್ತರ. ಬಿಎಸ್ಬಿಡಿಎಯಿಂದ ಹಿಂಪಡೆತಗಳ ಸಂಖ್ಯೆಯು ಅಂತಹ ಖಾತೆಗಳೊಂದಿಗಿನ ನಿಬಂಧನೆಗಳಿಗೆ ಒಳಪಟ್ಟಿರುವುದರಿಂದ ಮೇಲಿನವು ಬಿಎಸ್ಬಿಡಿಎಗೆ ಅನ್ವಯಿಸುವುದಿಲ್ಲ.
ಉತ್ತರ. ಗ್ರಾಹಕರು ಎಟಿಎಮ್ಗಳು/ಡಬ್ಲ್ಯೂಎಲ್ಎಗಳಲ್ಲಿ ವಹಿವಾಟುಗಳನ್ನು ಸುರಕ್ಷಿತವಾಗಿ ಹಾಗೂ ಸುಭದ್ರವಾಗಿಟ್ಟುಕೊಳ್ಳಲು ಕೆಳಗಿನ ಮಾಡಬೇಕಾದವುಗಳು ಹಾಗೂ ಮಾಡಬಾರದವುಗಳನ್ನು ಗಮನಿಸಬೇಕು:
- ಗ್ರಾಹಕರು ಎಟಿಎಮ್/ಡಬ್ಲ್ಯೂಎಲ್ಎ ವಹಿವಾಟನ್ನು ಸಂಪೂರ್ಣವಾಗಿ ಗೌಪ್ಯತೆಯಿಂದ ನಡೆಸಬೆಕು.
- ಒಂದು ಸಮಯದಲ್ಲಿ ಕೇವಲ ಒಬ್ಬ ಕಾರ್ಡ್ದಾರರು ಮಾತ್ರ ಎಟಿಎಮ್/ಡಬ್ಲ್ಯೂಎಲ್ಎ ಕಿಯೊಸ್ಕ್ ಅನ್ನು ಪ್ರವೇಶಿಸಬೇಕು ಹಾಗೂ ಪ್ರವೇಶಾವಕಾಶ ಪಡೆಯಬೇಕು.
- ಕಾರ್ಡ್ದಾರರು ಅವನ/ಅವಳ ಕಾರ್ಡ್ ಅನ್ನು ಯಾರೊಬ್ಬರಿಗೂ ಎರವಲು ಕೊಡಬಾರದು
- ಕಾರ್ಡದಾರರು ಕಾರ್ಡ್ನಲ್ಲಿ ಪಿನ್ ಅನ್ನು ಬರೆಯಬಾರದು.
- ಕಾರ್ಡದಾರರು ಯಾರೊಂದಿಗೂ ಪಿನ್ ಅನ್ನು ಹಂಚಿಕೊಳ್ಳಬಾರದು
- ಕಾರ್ಡದಾರರು ಎಟಿಎಮ್ನಲ್ಲಿ ಪಿನ್ ಅನ್ನು ನಮೂದಿಸುವಾಗ ಯಾರೊಬ್ಬರು ನೋಡದಂತೆ ನೋಡಿಕೊಳ್ಳಬೇಕು.
- ಕಾರ್ಡದಾರರು ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಎಂದಿಗೂ ಬಳಸಬಾರದು.
- ಕಾರ್ಡದಾರರು ಎಟಿಎಮ್/ಡಬ್ಲ್ಯೂಎಲ್ಎಯಲ್ಲಿ ಎಂದಿಗೂ ಕಾರ್ಡ್ ಅನ್ನು ಬಿಡಬಾರದು.
- ಕಾರ್ಡದಾರರು ಎಟಿಎಮ್ಗಳಲ್ಲಿ /ಡಬ್ಲ್ಯೂಎಲ್ಎಗಳಲ್ಲಿ ವಹಿವಾಟುಗಳಿಗಾಗಿ ಎಚ್ಚರಿಕೆಗಳನ್ನು ಪಡೆಯುವುದಕ್ಕಾಗಿ ಕಾರ್ಡ್ ನೀಡುವ ಬ್ಯಾಂಕ್ನೊಂದಿಗೆ ಅವನ/ಅವಳ ಮೊಬೈಲ್ ನಂಬರ್ ಅನ್ನು ನೋಂದಾಯಿಸಿಕೊಳ್ಳಬೇಕು.ಖಾತೆಯಲ್ಲಿನ ಯಾವುದೇ ಅನಧಿಕೃತ ಕಾರ್ಡ್ ವಹಿವಾಟು, ಗಮನಕ್ಕೆ ಬಂದರೆ , ತಕ್ಷಣ ಕಾರ್ಡ್ ನೀಡುವ ಬ್ಯಾಂಕ್ಗೆ ವರದಿ ಮಾಡಬೇಕು.
- ಕಾರ್ಡ್ದಾರರು ಜಾಗರೂಕರಾಗಿರಬೇಕು ಹಾಗೂ ಎಟಿಎಮ್ಗಳು ಹಾಗೂ ಡಬ್ಲ್ಯೂಎಲ್ಎಗಳಿಗೆ ಯಾವುದೇ ಹೆಚ್ಚಿನ ಸಾಧನಗ/ಳನ್ನು ಲಗತ್ತಿಸಲಾಗಿದೆಯೇ ಎಂದು ಪರಿಶೀಲಿಸಬೇಕು. ಗ್ರಾಹಕರ ಡೇಟಾ/ಗಳನ್ನು ಮೋಸದಿಂದ ಸೆರೆಹಿಡಿಯಲು ಸ್ಥಳದಲ್ಲಿ ಸಾಧನಗಳನ್ನು ಇಟ್ಟಿರಬಹುದು; ಕಂಡುಬಂದರೆ ,ಸೆಕ್ಯೂರಿಟಿ ಗಾರ್ಡ್/ಬ್ಯಾಂಕ್/ಡಬ್ಲ್ಯೂಎಲ್ಎ ಘಟಕಕ್ಕೆ ತಕ್ಷಣ ತಿಳಿಸಬೇಕು.
- ಕಾರ್ಡ್ದಾರರು ಎಟಿಎಮ್ಗಳು ಹಾಗೂ ಡಬ್ಲ್ಯೂಎಲ್ಎಗಳ ಸುತ್ತಲು ಜನರ ಅನುಮಾನಾಸ್ಪದ ಚಲನವಲನ/ಗಳ ಮೇಲೆ ಕಣ್ಣಿಟ್ಟಿರಬೆಕು. ಅವನು/ಅವಳು ಅಪರಿಚಿತರು ಅವನನ್ನು/ಅವಳನ್ನು ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಎಟಿಎಮ್ ಅನ್ನು ನಿರ್ವಹಿಸುವಲ್ಲಿ ನೆರವು/ ಸಹಾಯವನ್ನು ನೀಡಲು ಪ್ರಯತ್ನಿಸುವಾಗ ಜಾಗರೂಕರಾಗಿರಬೇಕು.
- ಬ್ಯಾಂಕ್ ಅಧಿಕಾರಿಗಳು ದೂರವಾಣಿ/ಇಮೇಲ್ನಲ್ಲಿ ಕಾರ್ಡ್ ವಿವರಗಳು ಅಥವಾ ಪಿನ್ಗಾಗಿ ಎಂದಿಗೂ ಕೇಳುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಉತ್ತರ. ಡಿಸೆಂಬರ್ 31,2018ರ ಮೊದಲು ಅಸ್ತಿತ್ವದಲ್ಲಿರುವ ಎಲ್ಲಾ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ಗಳನ್ನು ಇಎಮ್ವಿ ಚಿಪ್ ಹಾಗೂ ಪಿನ್ಕಾರ್ಡ್ಗಳಾಗಿ ಪರಿವರ್ತಿಸಲು ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ. ಕಾರ್ಡ್ದಾರರು ಅವನ/ಅವಳ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಅನ್ನು ಇಎಮ್ವಿ ಚಿಪ್ ಹಾಗೂ ಪಿನ್ಕಾರ್ಡ್ಗೆ ಬದಲಾಯಿಸಿರುವ ಕಾರ್ಡ್ ಅನ್ನು ಪಡೆಯದಿದ್ದರೆ, ಅವನು/ಅವಳು ಬದಲಿ ಕಾರ್ಡ್ ಅನ್ನು ಪಡೆಯಲು ಅವನ/ಅವಳ ಶಾಖೆಯನ್ನು ತಕ್ಷಣ ಸಂಪರ್ಕಿಸಬೇಕು.
ಈ ಎಫ್ಎಕ್ಯೂಗಳನ್ನು ಮಾಹಿತಿ ಹಾಗೂ ಸಾಮಾನ್ಯ ಮಾರ್ಗದರ್ಶನದ ಉದ್ದೇಶಗಳಿಗಾಗಿ ಮಾತ್ರ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಹೊರಡಿಸಿದೆ. ತೆಗೆದುಕೊಂಡ ಕ್ರಮಗಳು ಹಾಗೂ/ಅಥವಾ ಅದೇ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬ್ಯಾಂಕ್ ಜವಾಬ್ದಾರವಾಗಿರುವುದಿಲ್ಲ. ಸ್ಪಷ್ಟೀಕರಣಗಳು ಅಥವಾ ವ್ಯಾಖ್ಯಾನಗಳಿಗಾಗಿ , ಯಾವುದಾದರೂ ಇದ್ದರೆ, ಬ್ಯಾಂಕ್ನಿಂದ ಕಾಲ ಕಾಲಕ್ಕೆ ನೀಡಲಾಗುವ ಸಂಬಂಧಿತ ಸುತ್ತೋಲೆಗಳು ಹಾಗೂ ಅಧಿಸೂಚನೆಗಳಿಂದ ಒಬ್ಬರಿಗೆ ಮಾರ್ಗದರ್ಶನ ನೀಡಬಹುದು.