New FAQ Page 2 - ಆರ್ಬಿಐ - Reserve Bank of India
ಎಟಿಎಮ್/ವೈಟ್ ಲೇಬಲ್ ಎಟಿಎಮ್
ಉತ್ತರ. ಹೌದು, ನವೆಂಬರ್ 01,2014ರಿಂದ ಜಾರಿಗೆ ಬಂದಂತೆ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖತೆದಾರರಿಗೆ ಎಟಿಎಮ್ಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತವಹಿವಾಟುಗಳನ್ನು ಈ ಕೆಳಗಿನಂತೆ ನೀಡಬೇಕು :
- ಯಾವುದೇ ಸ್ಥಳದಲ್ಲಿ ಬ್ಯಾಂಕಿನ ಸ್ವಂತ ಎಟಿಎಮ್ಗಳಲ್ಲಿ [ಆನ್-ಅಸ್ ವಹಿವಾಟುಗಳು] ವಹಿವಾಟುಗಳು: ಎಟಿಎಮ್ಗಳು ಸ್ಥಳವನ್ನು ಲೆಕ್ಕಿಸದೇ , ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು
- ಮೆಟ್ರೋ ಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಆರು ಮೆಟ್ರೋ ಸ್ಥಳಗಳಲ್ಲಿ ಎಟಿಎಮ್‌ಗಳು ಇದ್ದ ಸಂದರ್ಭದಲ್ಲಿ, ಅಂದರೆ ಮುಂಬೈ,ಹೊಸ ದೆಲ್ಲಿ,ಚೆನ್ನೈ,ಕಲ್ಕತ್ತಾ,ಬೆಂಗಳೂರು,ಹೈದರಾಬಾದ್, ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಮೂರು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
- ನಾನ್ -ಮೆಟ್ರೋಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಮೇಲಿನ ಆರು ಮೆಟ್ರೋ ಸ್ಥಳಗಳನ್ನು ಹೊರತುಪಡಿಸಿ ,ಯಾವುದೇ ಸ್ಥಳಗಳಲ್ಲಿ ,ಇತರ ಬ್ಯಾಂಕ್ ಎಟಿಎಮ್ಗಳಲ್ಲಿ ಬ್ಯಾಂಕ್ಗಳು ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
ಉತ್ತರ. ಎಟಿಎಮ್‌ಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತ ವಹಿವಾಟುಗಳನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ಉಚಿತವಾಗಿ ನೀಡಬಹುದು.
ಉತ್ತರ. ಬಿಎಸ್ಬಿಡಿಎಯಿಂದ ಹಿಂಪಡೆತಗಳ ಸಂಖ್ಯೆಯು ಅಂತಹ ಖಾತೆಗಳೊಂದಿಗಿನ ನಿಬಂಧನೆಗಳಿಗೆ ಒಳಪಟ್ಟಿರುವುದರಿಂದ ಮೇಲಿನವು ಬಿಎಸ್ಬಿಡಿಎಗೆ ಅನ್ವಯಿಸುವುದಿಲ್ಲ.
ಉತ್ತರ. ಉಚಿತವಹಿವಾಟುಗಳ ಸಂಖ್ಯೆಯ ಮೇಲಿನ ಸೂಚಿಯು ಹಣಕಾಸು ಹಾಗೂ ಹಣಕಾಸೇತರ ಎರಡೂ ವಹಿವಾಟುಗಳನ್ನು ಒಳಗೊಂಡಿರುತ್ತದೆ.
ಉತ್ತರ. ಗ್ರಾಹಕರಿಗೆ ಉಚಿತವಹಿವಾಟುಗಳ ಸಂಖ್ಯೆಯ ಲಭ್ಯತೆಗೆ ಸಂಬಂಧಿಸಿದಂತೆ ಎಟಿಎಮ್ನ ಸ್ಥಿತಿಯನ್ನು ಗುರುತಿಸಲು ಸಾಧ್ಯವಾಗಲು ಎಟಿಎಮ್ ಅಳವಡಿಸುವ ಬ್ಯಾಂಕ್ಗಳಿಗೆ ಪ್ರತಿ ಎಟಿಎಮ್ ಸ್ಥಳದಲ್ಲಿ ಎಟಿಎಮ್ ‘ಮೆಟ್ರೋ’ಅಥವಾ ‘ ನಾನ-ಮೆಟ್ರೋ’ ಸ್ಥಳದಲ್ಲಿದೆ ಎಂದು ಸೂಚಿಸಲು ಸೂಕ್ತವಾದ ವಿಧಾನಗಳನ್ನು[ಎಟಿಎಮ್ /ಸ್ಟಿಕರ್/ಪೋಸ್ಟರ್,ಮುಂತಾದವುಗಳ ಮೇಲೆ ಸಮದೇಶವನ್ನು ಪ್ರದರ್ಶಿಸಲಾಗುವುದು] ಬಳಸಲು ಸೂಚಿಸಲಾಗಿದೆ.
ಉತ್ತರ. ಹೌದು , ಎಟಿಎಮ್‌ಗಳಲ್ಲಿ ಕಡ್ಡಾಯಗೊಳಿಸಿರುವ ಉಚಿತ ಸಂಖ್ಯೆಯ ವಹಿವಾಟುಗಳ [ಮೇಲಿನ ಪ್ರಶ್ನೆ 11ರಲ್ಲಿ ಸೂಚಿಸಿದಂತೆ] ಮೇಲ್ಪಟ್ಟ ವಹಿವಾಟುಗಳಿಗಾಗಿ ಗ್ರಾಹಕರಿಗೆ ಶುಲ್ಕವನ್ನು ವಿಧಿಸಬಹುದು. ಹೀಗಿದ್ದಾಗ್ಯೂ, ಪ್ರಸ್ತುತದಲ್ಲಿ, ಈ ಶುಲ್ಕಗಳು ಅವನ/ಆವಳ ಬ್ಯಾಂಕಿನಿಂದ ಪ್ರತಿ ವಹಿವಾಟಿಗೆ [ಮತ್ತು ಅನ್ವಯವಾಗುವ ತೆರಿಗೆಗಳು, ಯಾವುದಾದರೂ ಇದ್ದರೆ] ಗರಿಷ್ಠ ರೂ.20/ನ್ನು ಮೀರಬಾರದು
ಉತ್ತರ. ಕೆಳಗಿನ ಪ್ರಕಾರದ ನಗದು ಹಿಂಪಡೆಯುವ ವಹಿವಾಟುಗಳಿಗಾಗಿ ಸೇವಾ ಶುಲ್ಕಗಳನ್ನು ಬ್ಯಾಂಕ್ ಸ್ವತಹ ನಿರ್ಧರಿಸಬಹುದು: ಎ) ಕ್ರೆಡಿಟ್ ಕಾರ್ಡ್ಗಳ ಬಳಕೆಯೊಂದಿಗೆ ನಗದು ಹಿಂಪಡೆಯುವಿಕೆ. ಬಿ) ವಿದೇಶದಲ್ಲಿರುವ ಎಟಿಎಮ್ನಲ್ಲಿ ನಗದು ಹಿಂಪಡೆಯುವಿಕೆ.
ಉತ್ತರ. ಸ್ವಂತ ಬ್ಯಾಂಕ್ ಎಟಿಎಮ್/ಇತರ ಬ್ಯಾಂಕ್ ಎಟಿಎಮ್/ಡಬ್ಲ್ಯೂಎಲ್ಎಯಲ್ಲಿ ಕಾರ್ಡ್ ಬಳಕೆಯನ್ನು ಲೆಕ್ಕಿಸದೇ , ಗ್ರಾಹಕರು ಕಾರ್ಡ್ ನೀಡುವ ಬ್ಯಾಂಕ್ಗೆ ಸಾಧ್ಯವಾದಷ್ಟು ಬೇಗನೆ ದೂರು ನೀಡಬೇಕು.
ಉತ್ತರ. ಬ್ಯಾಂಕುಗಳು ಎಟಿಎಮ್ ಆವರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಹೆಸರು/ಗಳುಹಾಗೂ ಸಂಪರ್ಕ್ಸಂಖ್ಯೆ/ಗಳು /ಶುಲ್ಕ ರಹಿತ ಸಂಖ್ಯೆಗಳು / ಹೆಲ್ಪ್ ಡೆಸ್ಕ್ ಸಂಖ್ಯೆಗಳನ್ನು ಪ್ರದರ್ಶಿಸಬೆಕಾಗುತ್ತದೆ. ಅಂತೆಯೇ, ಡಬ್ಲ್ಯೂಎಲ್ಎಗಳಲ್ಲಿ , ವಿಫಲ/ವಿವಾದಿತ ವಹಿವಾಟುಗಳಿಗೆ ಸಂಬಂಧಿಸಿದ ಯಾವುದೇ ದೂರನ್ನು ನೀಡುವುದಕ್ಕಾಗಿ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು/ ಶುಲ್ಕ ರಹಿತ ಸಂಖ್ಯೆಗಳು / ಸಹಾಯ ವಾಣಿ ಸಂಖ್ಯೆಗಳನ್ನು ಸಹ ಪ್ರದರ್ಶಿಸಬೆಕಾಗುತ್ತದೆ.
ಉತ್ತರ. ಆರ್ಬಿಐ ಸೂಚನೆಗಳ ಪ್ರಕಾರ (ಮೇ 27,2011ರ ದಿನಾಂಕದ ಡಿಪಿಎಸ್ಎಸ್.ಪಿಡಿ.ನಂ.2632/02.10.002/2010-2011 ) ವಿಫಲ ಎಟಿಎಮ್ ವಹಿವಾಟಿನ ಸಂದರ್ಭದಲ್ಲಿ , ದೂರು ನೀಡಿದ ದಿನಾಂಕದಿಂದ 7 ಕೆಲಸದ ದಿನಗಳೊಳಗಡೆ ಗ್ರಾಹಕರ ಖಾತೆಗೆ ಮರು-ಜಮಾ ಮಾಡುವ ಮೂಲಕ ಗ್ರಾಹಕರ ದೂರನ್ನು ಪರಿಹರಿಸಲು ಕಾರ್ಡ್ ನೀಡುವ ಬ್ಯಾಂಕ್ಗೆ ಅಧಿಕೃತ ಆದೇಶನೀಡಲಾಗಿದೆ.
ಈ ಪುಟವು ಸಹಾಯಕವಾಗಿತ್ತೇ?