New FAQ Page 2 - ಆರ್ಬಿಐ - Reserve Bank of India
ಎಟಿಎಮ್/ವೈಟ್ ಲೇಬಲ್ ಎಟಿಎಮ್
ಉತ್ತರ. ಬ್ಯಾಂಕೇತರರು ಸ್ಥಾಪಿಸಿದ, ಒಡೆತನಹೊಂದಿದ ಹಾಗೂ ನಿರ್ವಹಿಸುವ ಎಟಿಎಮ್ಗಳನ್ನು ಡಬ್ಲ್ಯೂಎಲ್ಎಗಳು ಎಂದು ಕರೆಯಲಾಗುತ್ತದೆ. ಬ್ಯಾಂಕೇತರ ಎಟಿಎಮ್ ನಿರ್ವಾಹಕರುಗಳಿಗೆ ಪೇಮೆಂಟ್ &ಸೆಟ್ಲಮೆಂಟ್ ಸಿಸ್ಟಮ್ಸ್ ಆ್ಯಕ್ಟ್ ,2007ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ[ ಆರ್ಬಿಐ] ಅಧಿಕಾರ ನೀಡಿದೆ. ಅಧಿಕೃತ ಡಬ್ಲ್ಯೂಎಲ್ಎನಿರ್ವಾಹಕರ ಪಟ್ಟಿಯು ಆರ್ಬಿಐ ವೆಬ್ಸೈಟ್ ನಲ್ಲಿ https://www.rbi.org.in/Scripts/PublicationsView.aspx?id=12043ಲಿಂಕ್ನಲ್ಲಿ ಲಭ್ಯವಿರುತ್ತದೆ
ಉತ್ತರ. ಗ್ರಾಹಕರಿಗಾಗಿ, ಡಬ್ಲ್ಯೂಎಲ್ಎ ಬಳಸುವುದು ಡಬ್ಲ್ಯೂಎಲ್ಎಗಳಲ್ಲಿ ನಗದು ಠೇವಣಿ ಹಾಗೂ ಕೆಲವು ಮೌಲ್ಯವರ್ಧಿತ ಸೇವೆಗಳನ್ನು ಸ್ವೀಕರಿಸಲು ಅನುಮತಿಸುವುದಿಲ್ಲ ಎಂಬುದನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ [ಕಾರ್ಡ್ ನೀಡುವ ಬ್ಯಾಂಕ್ನ ಹೊರತಾದ ಬ್ಯಾಂಕ್] ನ ಎಟಿಎಮ್ ಅನ್ನು ಬಳಸುವಂತೆಯೇ ಇರುತ್ತದೆ.
ಉತ್ತರ. ವ್ಹೈಟ್ ಲೇಬಲ್ ಎಟಿಎಮ್ಗಳನ್ನು ಸ್ತಾಪಿಸಲು ಬ್ಯಾಂಕೇತರ ಘಟಕಕ್ಕೆ ಅವಕಾಶ ನೀಡುವ ನ್ಯಾಯ ಸಮ್ಮತವಾದ ಆಧಾರವೆಂದರೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ,ಹೆಚ್ಚಿದ /ವರ್ಧಿತ ಗ್ರಾಹಕ ಸೇವೆಗಾಗಿ ಎಟಿಎಮ್ನ ಭೌಗೋಲಿಕ ಹರಡುವಿಕೆಯನ್ನು ಹೆಚ್ಚಿಸುವುದಾಗಿರುತ್ತದೆ.
ಉತ್ತರ. ನಗದು ವಿತರಣೆಯ ಜೊತೆಗೆ, ಎಟಿಎಮ್ಗಳು/ಡಬ್ಲ್ಯೂಎಲ್ಎಗಳು ಗ್ರಾಹಕರಿಗೆ ಅನೇಕ ಇತರ ಸೇವೆಗಳು/ಸೌಲಭ್ಯಗಳನ್ನು ನೀಡಬಹುದು. ಈ ಕೆಲವು ಸೇವೆಗಳು ಒಳಗೊಂಡಿರುತ್ತವೆ :
- ಖಾತೆಯ ಮಾಹಿತಿ
- ನಗದು ಠೇವಣಿ [ಡಬ್ಲ್ಯೂಎಲ್ಎಗಳಲ್ಲಿ ಅನುಮತಿಸಲಾಗುವುದಿಲ್ಲ]
- ನಿಯಮಿತ ಬಿಲ್ಗಳ ಪಾವತಿ [ಡಬ್ಲ್ಯೂಎಲ್ಎಗಳಲ್ಲಿ ಅನುಮತಿಸಲಾಗುವುದಿಲ್ಲ]
- ಮೊಬೈಲ್ಗಳಿಗಾಗಿ ರೀ-ಲೋಡ್ ವ್ಹೌಚರಗಳ ಖರೀದಿ
- ಮಿನಿ/ಶಾರ್ಟ್ ಸ್ಟೇಟ್ಮೆಂಟ್ ಜನರೇಷನ್
- ಪಿನ್ ಬದಲಾವಣೆ
- ಚೆಕ್ ಬುಕ್ಗಾಗಿ ಕೋರಿಕೆ
ಉತ್ತರ. ಎಎಟಿಎಮ್ /ಎಟಿಎಮ್ ಕಮ್ ಡೆಬಿಟ್ ಕಾರ್ಡ್ಗಳು,ಕ್ರೆಡಿಟ್ ಕಾರ್ಡ್ಗಳು ಹಾಗೂ ಪ್ರಿಪೇಯ್ಡ್ ಕಾರ್ಡ್ಗಳನ್ನು , ನೀಡಿಕೆದಾರರು ಅನುಮತಿಸಿದಂತೆ ,ವಿವಿಧ ವಹಿವಾಟುಗಳಿಗಾಗಿ ಎಟಿಎಮ್ಗಳು /ಡಬ್ಲ್ಯೂಎಲ್ಎಗಳಲ್ಲಿ ಬಳಸಬಹುದು .
ಉತ್ತರ. ಹೌದು, ನವೆಂಬರ್ 01,2014ರಿಂದ ಜಾರಿಗೆ ಬಂದಂತೆ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖತೆದಾರರಿಗೆ ಎಟಿಎಮ್ಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತವಹಿವಾಟುಗಳನ್ನು ಈ ಕೆಳಗಿನಂತೆ ನೀಡಬೇಕು :
- ಯಾವುದೇ ಸ್ಥಳದಲ್ಲಿ ಬ್ಯಾಂಕಿನ ಸ್ವಂತ ಎಟಿಎಮ್ಗಳಲ್ಲಿ [ಆನ್-ಅಸ್ ವಹಿವಾಟುಗಳು] ವಹಿವಾಟುಗಳು: ಎಟಿಎಮ್ಗಳು ಸ್ಥಳವನ್ನು ಲೆಕ್ಕಿಸದೇ , ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು
- ಮೆಟ್ರೋ ಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಆರು ಮೆಟ್ರೋ ಸ್ಥಳಗಳಲ್ಲಿ ಎಟಿಎಮ್‌ಗಳು ಇದ್ದ ಸಂದರ್ಭದಲ್ಲಿ, ಅಂದರೆ ಮುಂಬೈ,ಹೊಸ ದೆಲ್ಲಿ,ಚೆನ್ನೈ,ಕಲ್ಕತ್ತಾ,ಬೆಂಗಳೂರು,ಹೈದರಾಬಾದ್, ಬ್ಯಾಂಕುಗಳು ತಮ್ಮ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಮೂರು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
- ನಾನ್ -ಮೆಟ್ರೋಸ್ಥಳಗಳಲ್ಲಿ ಯಾವುದೇ ಇತರ ಬ್ಯಾಂಕ್ಗಳ ಎಟಿಎಮ್ಗಳಲ್ಲಿ [ಆಫ್-ಅಸ್ ವಹಿವಾಟುಗಳು ]ವಹಿವಾಟುಗಳು : ಮೇಲಿನ ಆರು ಮೆಟ್ರೋ ಸ್ಥಳಗಳನ್ನು ಹೊರತುಪಡಿಸಿ ,ಯಾವುದೇ ಸ್ಥಳಗಳಲ್ಲಿ ,ಇತರ ಬ್ಯಾಂಕ್ ಎಟಿಎಮ್ಗಳಲ್ಲಿ ಬ್ಯಾಂಕ್ಗಳು ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಒಂದು ತಿಂಗಳದಲ್ಲಿ ಕನಿಷ್ಠ ಐದು ಉಚಿತ ವಹಿವಾಟುಗಳನ್ನು [ಹಣಕಾಸಿನ ಹಾಗೂ ಹಣಕಾಸೇತರ ಎರಡನ್ನೂ ಒಳಗೊಂಡು] ನೀಡಬೇಕು.
ಉತ್ತರ. ಬಿಎಸ್ಬಿಡಿಎಯಿಂದ ಹಿಂಪಡೆತಗಳ ಸಂಖ್ಯೆಯು ಅಂತಹ ಖಾತೆಗಳೊಂದಿಗಿನ ನಿಬಂಧನೆಗಳಿಗೆ ಒಳಪಟ್ಟಿರುವುದರಿಂದ ಮೇಲಿನವು ಬಿಎಸ್ಬಿಡಿಎಗೆ ಅನ್ವಯಿಸುವುದಿಲ್ಲ.