ಸಿಟಿಜನ್ಸ್ ಕಾರ್ನರ್ - ಆರ್ಬಿಐ - Reserve Bank of India


ಅವಲೋಕನ
ಸುಸ್ವಾಗತ. ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಿಮ್ಮನ್ನು ತಲುಪಲು ಮಾಡಿರುವ ಕಳಕಳಿಯ ಪ್ರಯತ್ನವಿದು. ರಾಷ್ಟ್ರದ ಕೇಂದ್ರ ಬ್ಯಾಂಕ್ ಆಗಿ ನಾವು ನಿಮ್ಮ ಹಣದ ಮೌಲ್ಯವನ್ನು ಕಾಪಾಡಲು ಹೆಚ್ಚಿನ ರೀತಿಯಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ ಸಂಪತ್ತನ್ನು ಸಂರಕ್ಷಿಸುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವುದೂ ಸಹ ಈ ಪ್ರಯತ್ನದ ಒಂದು ಭಾಗ.
ನಿಮ್ಮನ್ನು ತಲುಪುವ ಒಂದು ಸುಲಭ ಸುಗಮ ಮಾರ್ಗವಾಗಿ, ನೀವು ಉಪಯೋಗಿಸಬಹುದಾದ ಮಾಹಿತಿಗಳನ್ನು ಈ ವೆಬ್ ತಾಣದಲ್ಲಿ ನಾವು ನಿಮಗೆ ನಿಮ್ಮದೇ ಭಾಷೆಯಲ್ಲಿ ನೀಡುತ್ತಿದ್ದೇವೆ. ಪ್ರಾರಂಭದಲ್ಲಿ, ಭಾರತದ ಕೇಂದ್ರ ಬ್ಯಾಂಕ್ ನಿಮಗೆ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದರ ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಪಾತ್ರ ಮತ್ತು ಕಾರ್ಯ ಕಲಾಪಗಳನ್ನು ಪರಿಚಯಿಸುತ್ತಿದ್ದೇವೆ. ನೀವು ನಿಮ್ಮ ಬ್ಯಾಂಕಿನ ಜೊತೆಗಿನ ಸಂಬಂಧಗಳನ್ನು ಕುರಿತ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಂತ್ರಣಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ನೀವು ಪ್ರಶ್ನೆಗಳನ್ನೂ ಕೇಳಬಹುದು ಮತ್ತು ನಿಮ್ಮ ಸಂದೇಹಗಳನ್ನೂ ಪರಿಹರಿಸಿಕೊಳ್ಳಬಹುದು ಹಾಗು, ರಿಸರ್ವ್ ಬ್ಯಾಂಕಿನ ಇಲಾಖೆ ಅಥವಾ ಕಚೇರಿ ಅಥವಾ ನಿಮ್ಮ ಬ್ಯಾಂಕಿನ ಸೇವಾಲೋಪಗಳ ವಿರುದ್ದ ನೀವು ದೂರುಗಳನ್ನೂ ನೀಡಬಹುದು. ನಾವು ನಿಮಗೆ ಹಣ, ಬ್ಯಾಂಕಿಂಗ್ ಮತ್ತು ವಿತ್ತ ವಿಷಯಗಳ ಬಗ್ಗೆಯೂ ಸಹ ಮಾಹಿತಿಯನ್ನು ನೀಡುತ್ತೇವೆ. ಕೆಲವು ಆಸಕ್ತಿಯುಕ್ತ ಮತ್ತೆ ಕೆಲವು ಉಪಯುಕ್ತ. ಏಕೆಂದರೆ...
...ಶ್ರೀ ಸಾಮಾನ್ಯನಿಗೆ ಸಂಪತ್ತನ್ನು ಸಂರಕ್ಷಿಸಿಕೊಳ್ಳಲು ಇದು ಖಚಿತವಾದ ಹಾಗೂ ಸುರಕ್ಷಿತವಾದ ಅರಿವಿನ ಮಾರ್ಗವೆಂದು ನಾವು ನಂಬಿದ್ದೇವೆ.