ವಂಚನೆಯ ಇಮೇಲ್ಗಳು, ಕರೆಗಳು ಮತ್ತು ಇಮೇಲ್ಗಳ ಮೇಲೆ ಎಸ್ಎಂಎಸ್ - ಆರ್ಬಿಐ - Reserve Bank of India
ಆರ್ಬಿಐ ಎಚ್ಚರಿಕೆ ಮೇಲೆ ಎಸ್ಎಮ್ಎಸ್
1. ದೊಡ್ಡ ಮೊತ್ತದ ಹಣ ಪಡೆಯಲು ಬದಲಿಗೆ ಫೀಸ್ ಅಥವಾ ಚಾರ್ಜು ಕೊಡಬೇಡಿ. ಆರ್ಬಿಐ/ ಆರ್ಬಿಐ ಗವರ್ನರ್/ ಸರಕಾರ ಎಂದೂ ಅಂತಹ ಇಮೇಲ್/ಎಸ್ಎಮ್ಎಸ್/ಕರೆಗಳನ್ನು ಕಳುಹಿಸುವುದಿಲ್ಲ. ಅಧಿಕ ವಿವರಗಳಿಗೆ 8691960000ಗೆ ಮಿಸ್ಡ್ ಕರೆ ನೀಡಿ.
2. ನಿಮಗೆ ಲಾಟರಿ ಗೆದ್ದಿದ್ದೀರೆಂದು ಅಥವಾ ಆರ್ಬಿಐ / ಸರಕಾರ ಸಂಸ್ಥೆಯಿಂದ ಚೀಪ್ ಹಣ ದೊರೆಯುತ್ತದೆ ಎಂದು ಕರೆ ಬಂದರೆ ಇಲ್ಲಿಗೆ ದೂರು ನೀಡಿ: https://sachet.rbi.org.in/Complaints/Add
ಆರ್ಬಿಐ ಎಚ್ಚರಿಕೆ ಮೇಲೆ ಒಬಿಡಿ
ವಂಚಕರು ನಿಮಗೆ ವಂಚಿಸಲು ಪ್ರತಿ ಬಾರಿಯೂ ಹೊಸ ಮಾರ್ಗಗಳನ್ನೇ ಅನುಸರಿಸುತ್ತಾರೆ. ಕೆಲವೊಮ್ಮೆ ನೀವು ಲಾಟರಿ ಪಡೆದ ಹಣ ಪಡೆಯಲು ಆರ್ಬಿಐಯಲ್ಲಿ ಹಣ ಡಿಪೋಸಿಟ್ ಮಾಡಲು ಹೇಳುವರು ಅಥವಾ ಕೆಲವೊಮ್ಮೆ ನಿಮಗೆ ಬಂದ ಸಾಮಾನುಗಳನ್ನು ಬಿಡಿಸಿಕೊಳ್ಳಲು ಕಸ್ಟಮ್ಸ್ ಡ್ಯೂಟಿ ಕಟ್ಟಿ ಎಂದು ತಿಳಿಸಬಹುದು. ಅಂತಹ ಏನಾದರೂ ಕೊಡುಗೆಗಳು ನಿಮಗೆ ಬಂದರೆ ಸ್ಥಳೀಯ ಪೋಲೀಸ್ನ ಸೈಬರ್ ಕ್ರೈಮ್ ಬ್ರಾಂಚ್ಗೆ ಅಥವಾ sachet.rbi.org.in ಗೆ ದೂರು ನೀಡಿ.
और सुनो आरबीआई क्या कहता है ।
- ಆರ್ಬಿಐ ವ್ಯಕ್ತಿಗತವಾಗಿ ಖಾತೆಗಳನ್ನು ತೆರೆಯುವುದಿಲ್ಲ. ಆದುದರಿಂದ ಆರ್ಬಿಐಯಲ್ಲಿ ಹಣ ಡಿಪೋಸಿಟ್ ಮಾಡುವ ಪ್ರಶ್ನೆಯೇ ಇಲ್ಲ. ದಯವಿಟ್ಟು ಅಪರಿಚಿತರ ಎಸ್ಎಮ್ಎಸ್, ಕರೆ ಅಥವಾ ಇಮೇಲ್ಗೆ ಓಗೊಟ್ಟು ದಾರಿ ತಪ್ಪಬೇಡಿ ಹಾಗೂ ಯಾವುದೇ ಬ್ಯಾಂಕು ಖಾತೆಗೆ ಹಣ ಡಿಪೋಸಿಟ್ ಮಾಡಬೇಡಿ.
- ನಿಮ್ಮ ಬ್ಯಾಂಕು ಖಾತೆಯ ವಿವರ ಅಥವಾ ಸಿವಿವಿ, ಒಟಿಪಿ ಅಥವಾ ಪಿನ್ನ್ನು ಯಾರಿಗೂ ನೀಡಬೇಡಿ. ಆರ್ಬಿಐ ಏಕೆ ನಿಮ್ಮ ಬ್ಯಾಂಕು ಸಹ ಅಂತಹ ವಿವರಗಳನ್ನು ಎಸ್ಎಮ್ಎಸ್, ಫೋನ್ ಅಥವಾ ಇಮೇಲ್ ಮೂಲಕ ನಿಮ್ಮ ಬ್ಯಾಂಕು ಇವೆಲ್ಲವನ್ನು ಎಂದೂ ಕೇಳುವುದಿಲ್ಲ.
ಅಧಿಕ ವಿವರಗಳಿಗೆ rbi.org.in ನಲ್ಲಿ RBI Cautions ಪುಟ ನೋಡಿ.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ