ಯಾವುದೇ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಬಿಎಸಬಿಡಿ ಅಕೌಂಟ್ - ಆರ್‌ಬಿಐ - Reserve Bank of India
ಮೇಲ್ನೋಟ
ಮೇಲ್ನೋಟ
ಬೇಸಿಕ್ ಉಳಿತಾಯ ಬ್ಯಾಂಕ್ ಡಿಪಾಸಿಟ್ ( ಬಿಎಸಬಿಡಿ) ಖಾತೆ ತೆರೆಯಿರಿ, ಕನಿಷ್ಠ ಬ್ಯಾಲೆನ್ಸ್ ಮೆಂಟೇನ್ ಮಾಡುವ ಅಗತ್ಯವಿಲ್ಲ. ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಥವಾ ಫಾರ್ಮ್ ನಂ, 60, ಇದರ ಮೂಲಕ ಈ ಖಾತೆ ತೆರೆಯೋದು ತುಂಬಾ ಸುಲಭವಾಗಿದೆ..
- ಬೇಸಿಕ್ ಉಳಿತಾಯ ಬ್ಯಾಂಕ್ ಡೆಪಾಸಿಟ್ (ಬಿಎಸಬಿಡಿ) ಖಾತೆಗಾಗಿ ಅವಳ/ಅವನ ಯಾವುದೇ ವಯಸ್ಸು ಅಥವಾ ಆದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಖಾತೆ ತೆರೆಯಬಹುದು.
- ಬಿಎಸಬಿಡಿ ಖಾತೆಯನ್ನು ಆರಂಭಿಕ ಡೆಪಾಸಿಟ್ ನೀಡದೆಯೂ ತೆರೆಯಬಹುದು ಮತ್ತು ಅದರಲ್ಲಿ ಯಾವುದೇ ರೀತಿಯ ಕನಿಷ್ಠ ಬ್ಯಾಲೆನ್ಸ್ ಇರಿಸುವ ಅಗತ್ಯವೂ ಇಲ್ಲ.
- ರೆಗ್ಯೂಲರ್ ಉಳಿತಾಯ ಬ್ಯಾಂಕ್ ಖಾತೆಯನ್ನು ಗ್ರಾಹಕರ ಒಪ್ಪಿಗೆಯ ಮೇರೆಗೆ ಬಿಎಸಬಿಡಿ ಖಾತೆಯಾಗಿ ಪರಿವರ್ತಿಸಿಕೊಳ್ಳಬಹುದು.
- ಬೇಸಿಕ್ ಬ್ಯಾಂಕಿನ ಸೌಲಭ್ಯಗಳಲ್ಲೊಂದಾದ ಏಟಿಎಂ-ಕಮ್-ಡೆಬಿಟ್ ಕಾರ್ಡನ್ನು ಬಿಎಸಬಿಡಿ ಖಾತೆದಾರರಿಗೆ ಉಚಿತವಾಗಿ ನೀಡಲಾಗುತ್ತದೆ.
- ಬಿಎಸಬಿಡಿ ಖಾತೆಯಲ್ಲಿ ತಿಂಗಳಿಗೆ ಎಷ್ಟು ಸಲ ಬೇಕಾದರೂ ಡೆಪಾಸಿಟ್ ಮಾಡಬಹುದು ಯಾವುದೇ ಲಿಮಿಟ್ ಇರುವುದಿಲ್ಲ.
- ಬಿಎಸಬಿಡಿ ಖಾತೆದಾರರು ತಿಂಗಳಿಗೆ ಗರಿಷ್ಠ 4 ಬಾರಿ ಉಚಿತ ವಿದ್ ಡ್ರಾ ಮಾಡಬಹುದು. ಅಂದರೆ ಅದರಲ್ಲಿ ಏಟಿಎಮ್ ವಿದ್ ಡ್ರಾವಲ್ಸ್ ಆರ್ ಟಿ ಜೆ ಎಸ್/ ಎನ್ ಈ ಎಫ್ ಟಿ ಮುಖೇನ ಟ್ರಾನ್ಸಫರ್/ಕ್ಲಿಯರಿಂಗ್/ ಇಂಟರ್ ನೆಟ್ ಡೆಬಿಟ್ಸ್/ ಸ್ಟ್ಯಾಂ ಇನಸ್ಟ್ರಕ್ಷನ್/ಈಎಂಐಗಳು ಇತ್ಯಾದಿ ಒಳಗೊಂಡಿದೆ.
- ಬಿಎಸಬಿಡಿ ಖಾತೆದಾರರು ಅದೇ ಬ್ಯಾಂಕನಲ್ಲಿ ರೆಗ್ಯೂಲರ್ ಉಳಿತಾಯ ಬ್ಯಾಂಕ್ ಖಾತೆ ತೆರೆಯುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 19, 2024
ಈ ಪುಟವು ಸಹಾಯಕವಾಗಿತ್ತೇ?