ನಿಮ್ಮ ಬ್ಯಾಂಕ್ನೋಟ್ಗಳನ್ನು ತಿಳಿಯಿರಿ - ಆರ್ಬಿಐ - Reserve Bank of India
ಮೇಲ್ನೋಟ


ಮೇಲ್ನೋಟ
- ಕರೆನ್ಸಿ ನೋಟ್‌ಗಳು ರಾಷ್ಟ್ರದ ಸಮೃದ್ಧಿ ಹಾಗೂ ವಿವಿಧ ಸಂಸ್ಕೃತಿ, ಸ್ವಾತಂತ್ಯ್ರಕ್ಕಾಗಿ ಅವರ ಹೋರಾಟ ಹಾಗೂ ರಾಷ್ಟ್ರಕ್ಕಾಗಿ ಅವರ ಹೆಮ್ಮೆಯ ಸಾಧನೆಯನ್ನು ಪ್ರತಿಬಿಂಭಬಿಸುತ್ತವೆ.
- ದೇಶದ ಸಾಂಸ್ಕೃತಿಕ ಪರಂಪರೆಗೆ ಗುರುತನ್ನು ಹತ್ತಿರ ತರುವ ಉದ್ದೇಶದಿಂದ ಹಾಗೂ ಅವರ ವೈಜ್ಞಾನಿಕ ಪ್ರಗತಿಯನ್ನು ಪ್ರದರ್ಶಿಸುವ ಉದ್ದೇಶದಿಂದ, ಹೊಸ ವಿನ್ಯಾಸದಲ್ಲಿ ನೋಟುಗಳ ಹೊಸ ಸರಣಿಯನ್ನು ಪ್ರಾರಂಭಿಸಲಾಗುತ್ತಿದೆ.
- ಹೊಸ ವಿನ್ಯಾಸದ ಬ್ಯಾಂಕ್ ನೋಟ್‌ಗಳು ಬಣ್ಣ,ಗಾತ್ರ ಹಾಗೂ ಥೀಮ್‌ನಲ್ಲಿ ಪ್ರಸ್ತುತದಲ್ಲಿರುವ ಮಹಾತ್ಮಾ ಗಾಂಧಿ ಸರಣಿಗಳ ಬ್ಯಾಂಕ್ ನೋಟ್‌ಗಳಿಗಿಂತ ಸ್ಪಷ್ಟವಾಗಿ ಭಿನ್ನವಾಗಿವೆ. ಹೊಸ ಸರಣಿಯ ನೋಟ್‌ಗಳ ವಿಷಯವು ಭಾರತದ ಪಾರಂಪರಿಕ ತಾಣಗಳಾಗಿರುತ್ತವೆ.
- ಈ ನೋಟುಗಳಲ್ಲಿ ಸೇರಿಸಲಾದ ಕೆಲವು ಹೊಸ ಇತರ ಅಂಶಗಳೆಂದರೆ ದೇವನಾಗರಿಯಲ್ಲಿ ಅಂಕಿಗಳು ಹಾಗು ಸ್ವಚ್ಛ ಭಾರತದ ಲೋಗೋ . ಹೊಸ ನೋಟುಗಳು ಅಸಂಖ್ಯಾತ ಹಾಗೂ ಜಟಿಲ ರೂಪ ಹಾಗೂ ಆಕಾರಗಳಲ್ಲಿ ಮೂಲತತ್ವಗಳ ವಿನ್ಯಾಸವನ್ನು ಸಹ ಹೊಂದಿವೆ.
- ಬ್ಯಾಂಕ್ ನೋಟ್‌ಗಳ ಪ್ರಸ್ತುತ ಸರಣಿಗಳಲ್ಲಿನ ಸುರಕ್ಷತಾ ವೈಶಿಷ್ಟ್ಯತೆಗಳಾದ ವಾಟರ್ ಮಾರ್ಕ್,ಸೆಕ್ಯುರಿಟಿ ಥ್ರೆಡ್,ಮುಖಬೆಲೆಯ ಅಂಕಿಗಳ ಸುಪ್ತ ಚಿತ್ರ,ಬಣ್ಣ ಪಲ್ಲಟಗೊಳ್ಳುವ ಶಾಯಿಯಲ್ಲಿ ಮುಖಬೆಲೆಯ ಸಂಖ್ಯೆ, ಸಂಖ್ಯಾ ಪ್ಯಾನಲ್‌ಗಳು, ಸೀ ಥ್ರೂ ರೆಜಿಸ್ಟರ್, ಇಲೆಕ್ಟ್ರೋ ಟೈಪ್ , ಬ್ಲೀಡ್ ಲೈನ್ಸ್, ಮುಂತಾದವುಗಳನ್ನು ನಿರ್ವಹಿಸಲಾಗಿದೆ , ಹೊಸ ವಿನ್ಯಾಸದ ನೋಟುಗಳಲ್ಲಿ ಅವುಗಳ ಸಾಪೇಕ್ಷ --ಸ್ಥಾನಗಳು ಬದಲಾಗಿರಬಹುದು.
ಬ್ಯಾಂಕ್‌ನೋಟ್‌ಗಳು
ದೊಡ್ಡ ಆವೃತ್ತಿ ಹಾಗೂ ವಿವರಗಳನ್ನು ವೀಕ್ಷಿಸಲು ದಯವಿಟ್ಟು ನೋಟ್‌ಗಳ ಮೇಲೆ ಕ್ಲಿಕ್‌ಮಾಡಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಈ ಪುಟವು ಸಹಾಯಕವಾಗಿತ್ತೇ?