ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಟ್ರಾನ್ಸಾಕ್ಷನ್‌ಗಳಲ್ಲಿ ಗ್ರಾಹಕರ ಹೊಣೆಗಾರಿಕೆಯ ಮೇಲೆ ಎಸ್ಎಂಎಸ್ - ಆರ್‌ಬಿಐ - Reserve Bank of India
ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟಿನಲ್ಲಿ ಗ್ರಾಹಕರ ಬಾಧ್ಯತೆಯ ಕುರಿತು ಎಸ್‌ಎಂಎಸ್
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮೋಸದ ವ್ಯವಹಾರ ನಡೆಯುತ್ತಿದೆಯೇ? ನಿಮ್ಮ ನಷ್ಟವನ್ನು ಮಿತಿಗೊಳಿಸಿ. ನಿಮ್ಮ ಬ್ಯಾಂಕ್‌ಗೆ ತಕ್ಷಣ ತಿಳಿಸಿ. ಹೆಚ್ಚಿನ ವಿವರಗಳಿಗಾಗಿ, 14440 ಕ್ಕೆ ಮಿಸ್ಡ್ ಕಾಲ್ ನೀಡಿ.
ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟಿನಲ್ಲಿ ಗ್ರಾಹಕರ ಬಾಧ್ಯತೆ ಕುರಿತು ಐವಿಆರ್‌ಎಸ್
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ಮೋಸದಿಂದ ಹಣವನ್ನು ಹಿಂಪಡೆದುಕೊಂಡಿದ್ದರೆ, ತಕ್ಷಣ ನಿಮ್ಮ ಬ್ಯಾಂಕ್‌ಗೆ ತಿಳಿಸಿ. ನೀವು ಬ್ಯಾಂಕಿಗೆ ತಿಳಿಸಿದಾಗ, ನಿಮ್ಮ ಬ್ಯಾಂಕಿನಿಂದ ರಸೀದಿ ತೆಗೆದುಕೊಳ್ಳಲು ಮರೆಯಬೇಡಿ. ರಸೀದಿ ಪಡೆದ ದಿನಾಂಕದಿಂದ 90 ದಿನಗಳಲ್ಲಿ ಬ್ಯಾಂಕ್ ನಿಮ್ಮ ದೂರನ್ನು ಪರಿಹರಿಸಬೇಕಾಗುತ್ತದೆ.
ನಿಮ್ಮ ನಿರ್ಲಕ್ಷ್ಯದಿಂದಾಗಿ ವಹಿವಾಟು ನಡೆದಿದ್ದರೆ, ಅಂದರೆ, ನಿಮ್ಮ ಪಾಸ್‌ವರ್ಡ್, ಪಿನ್, ಒಟಿಪಿ ಇತ್ಯಾದಿಗಳನ್ನು ನೀವು ಹಂಚಿಕೊಂಡಿದ್ದರಿಂದ, ನೀವು ಅದನ್ನು ನಿಮ್ಮ ಬ್ಯಾಂಕ್‌ಗೆ ವರದಿ ಮಾಡುವವರೆಗೆ ಉಂಟಾದ ನಷ್ಟವನ್ನು ಭರಿಸಬೇಕಾಗುತ್ತದೆ. ನೀವು ಬ್ಯಾಂಕ್‌ಗೆ ಮಾಹಿತಿ ನೀಡಿದ ನಂತರವೂ ಮೋಸದ ವಹಿವಾಟುಗಳು ಮುಂದುವರಿದರೆ, ನಿಮ್ಮ ಬ್ಯಾಂಕ್ ಆ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ. ನೀವು ತಿಳಿಸಲು ವಿಳಂಬ ಮಾಡಿದರೆ, ನಿಮ್ಮ ನಷ್ಟವು ಹೆಚ್ಚಾಗುತ್ತದೆ ಹಾಗೂ ಇದನ್ನು ಆರ್‌ಬಿಐ ಮಾರ್ಗಸೂಚಿಗಳು ಹಾಗೂ ನಿಮ್ಮ ಬ್ಯಾಂಕಿನ ಆಡಳಿತ ಮಂಡಳಿಯು ಅನುಮೋದಿಸಿದ ನೀತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಆಡಿಯೋ
ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟಿನಲ್ಲಿ ಗ್ರಾಹಕರ ಬಾಧ್ಯತೆ ಕುರಿತು ಎಸ್‌ಎಂಎಸ್ ಆಲಿಸಲು ಕ್ಲಿಕ್ ಮಾಡಿ (ಹಿಂದಿ ಭಾಷೆ)
ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟಿನಲ್ಲಿ ಗ್ರಾಹಕರ ಬಾಧ್ಯತೆ ಕುರಿತು ಎಸ್‌ಎಂಎಸ್ ಆಲಿಸಲು ಕ್ಲಿಕ್ ಮಾಡಿ (ಇಂಗ್ಲೀಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ