ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಎಸ್ಎಂಎಸ್ - ಆರ್ಬಿಐ - Reserve Bank of India
ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಎಸ್‌ಎಮ್‌ಎಸ್
ಆನ್‌ಲೈನ್ ಬ್ಯಾಂಕಿಂಗ್? https;ಯೊಂದಿಗಿನ ಸೈಟ್‌ಗಳನ್ನು ಮಾತ್ರ ಬಳಸಿ ; ಉಚಿತ ನೆಟ್ವರ್ಕ್ಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬೇಡಿ; ಪಾಸ್‌ವರ್ಡ್/ಪಿನ್ ಅನ್ನು ನಿಯಮಿತವಾಗಿ ಬದಲಾಯಿಸುತ್ತಿರಿ ಹಾಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.ಹೆಚ್ಚಿನ ಮಾಹಿತಿಗಾಗಿ, 14440ಕ್ಕೆ ಮಿಸ್ಡ್ ಕಾಲ್ ನೀಡಿ.

ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಐವಿಆರ್‌ಎಸ್
ತಕ್ಷಣ ಅಲರ್ಟ್ ಅನ್ನು ಪಡೆಯಲು ತಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಅನ್ನು ತಮ್ಮ ಬ್ಯಾಂಕ್‌ನೊಂದಿಗೆ ನೋಂದಾಯಿಸಿ. ನೀವು ಆರಂಭಿಸದ ಅಥವಾ ಅಧಿಕೃತ ಅಧಿಕಾರ ನೀಡದ ವಹಿವಾಟಿನ ಬಗ್ಗೆ ನೀವು ಅಲರ್ಟ್ ಅನ್ನು ಪಡೆದರೆ,ನೀವು ತಕ್ಷಣ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ನೀವು ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗ ಕೆಲವು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಮೊಬೈಲ್, ಇಮೇಲ್ ಅಥವಾ ವಾಲೆಟ್‌ನಲ್ಲಿ ಪ್ರಮುಖ ಬ್ಯಾಂಕಿಂಗ್ ಡೇಟಾವನ್ನು ಸಂಗ್ರಹಿಸಿಡಬೇಡಿ. ಆನ್‌ಲೈನ್ ಬ್ಯಾಂಕಿಂಗ್‌ಗಾಗಿ ಪರಿಶೀಲಿಸಿದ , ಸುರಕ್ಷಿತ ಹಾಗೂ ವಿಶ್ವಾಸಾರ್ಹ ವೆಬ್‌ಸೈಟ್‌ಗಳನ್ನು , ಅಂದರೆ https:ಯೊಂದಿಗೆ ಪ್ರಾರಂಭವಾಗುವ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ. ಸಾರ್ವಜನಿಕ, ತೆರೆದ ಅಥವಾ ಉಚಿತ ನೆಟ್ವರ್ಕ್ಗಳ ಮೂಲಕ ಬ್ಯಾಂಕಿಂಗ್ ವ್ಯವಾಹರವನ್ನು ಮಾಡಬೇಡಿ. ನಿಮ್ಮ ಆನ್ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಪಿನ್ ಅನ್ನು ಬದಲಾಯಿಸಿ. ನಿಮ್ಮ ಎಟಿಎಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪ್ರಿಪೇಯ್ಡ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ, ಅದನ್ನು ತಕ್ಷಣ ಬ್ಲಾಕ್ ಮಾಡಿಸಿ
ಆಡಿಯೋ
ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಎಸ್ಎಂಎಸ್ (ಹಿಂದಿ ಭಾಷೆ)
ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಎಸ್ಎಂಎಸ್ (ಇಂಗ್ಲಿಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ